Slide
Slide
Slide
previous arrow
next arrow

ಪುರಾಣದ ಪಾತ್ರಗಳಿಂದ ಉತ್ತಮ ಸಂದೇಶ: ಗುರುರಾಜ್

300x250 AD

ಸಿದ್ದಾಪುರ: ಜನ್ಮದಿಂದ ಶ್ರೇಷ್ಠರಲ್ಲ, ಕರ್ಮದಿಂದ ಶ್ರೇಷ್ಠರು ಎಂಬ ಪರಂಪರೆ ನಮ್ಮದು. ನಮ್ಮ ಪುರಾಣ, ಇತಿಹಾಸಗಳಲ್ಲಿ ಕಾಣುವ ಪಾತ್ರಗಳು ಯುಗ ಯುಗಾಂತರಗಳಲ್ಲೂ ಉತ್ತಮ ಸಂದೇಶವನ್ನು ನೀಡುತ್ತವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್ ಶಾನಭಾಗ್ ಹೇಳಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದ ಜಿಡ್ಡಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ವಿಷ್ಣು ನಾಯ್ಕ, ಸಾರ್ವಕಾಲಿಕವಾಗಿ ಸರಿಹೊಂದುವ ಗ್ರಂಥಗಳನ್ನು ಮಹಾಕಾವ್ಯಗಳು ಎನ್ನಬಹುದು. ವಾಲ್ಮೀಕಿ ವಿರಚಿತ ರಾಮಾಯಣ ಅಂತಹ ಗ್ರಂಥಗಳಲ್ಲೊ0ದಾಗಿದೆ. ರಾಮಾಯಣ ಕೇವಲ ಭಾರತದಲ್ಲಲ್ಲದೆ ವಿದೇಶಗಳಲ್ಲೂ ತನ್ನ ಖ್ಯಾತಿಯನ್ನು ಗಳಿಸಿದೆ. ರಾಮ ಎನ್ನುವ ವ್ಯಕ್ತಿತ್ವ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದೆ ಎಂದರು.

300x250 AD

ಪಟ್ಟಣ ಪಂಚಾಯತ ಸದಸ್ಯ ವೆಂಕೋಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಲ್ಮೀಕಿ ಸಮುದಾಯದ ಮುಖಂಡ ರಮೇಶ್ ಬೇಡರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಟ್ಟಣ ಪಂಚಾಯತ ಸದಸ್ಯ ನಂದನ ಬೋರ್ಕರ್ ವಾಲ್ಮೀಕಿ ಜಯಂತಿಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಸಂತೋಷ ಭಂಡಾರಿ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕುಮಾರ್ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಪಿ.ನರೋನ್ಹಾ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top