Slide
Slide
Slide
previous arrow
next arrow

ಜನ್ಮದಿನವನ್ನು ವೃದ್ಧಾಶ್ರಮದಲ್ಲಿ ಆಚರಿಸಿಕೊಂಡ ಮಾಧವ ನಾಯಕ

300x250 AD

ಕಾರವಾರ: ಜನಶಕ್ತಿ ವೇದಿಕೆ ಹಾಗೂ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಅವರು ಸದಾಶಿವಗಡದ ಸುರಭಿ ವೃದ್ಧಾಶ್ರಮದಲ್ಲಿ ತಮ್ಮ ಜನ್ಮದಿನವನ್ನು ಹಿರಿಯರೊಂದಿಗೆ ಆಚರಿಸಿಕೊಂಡರು.

ಸುರಭಿ ವೃದ್ಧಾಶ್ರಮಕ್ಕೆ ತಮ್ಮ ತಂದೆ- ತಾಯಿ, ಪತ್ನಿ, ಮಗ, ಮಗಳು ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿದ ಮಾಧವ ನಾಯಕ, ಅಲ್ಲಿ ವೃದ್ಧರೊಂದಿಗೆ ಕೆಲ ಕಾಲ ಸಮಯ ಕಳೆದು ಅವರ ಕ್ಷೇಮ- ಆರೋಗ್ಯ ವಿಚಾರಿಸಿದರು. ವೃದ್ಧರ ಹಿನ್ನೆಲೆ, ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿದರು. ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು.

ಬಳಿಕ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಂದೆ- ತಾಯಿಯೊಂದಿಗೆ ದೀಪ ಬೆಳಗಿದರು. ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿದರು. ವೃದ್ಧಾಶ್ರಮದಲ್ಲೇ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಸಿದ್ದ ಮಾಧವ ನಾಯಕ, ತಮ್ಮ ಪತ್ನಿಯೊಂದಿಗೆ ತಾವೇ ಖುದ್ದಾಗಿ ಎಲ್ಲರಿಗೂ ಉಣಬಡಿಸಿದರು. ತಮ್ಮೊಂದಿಗಿದ್ದು ತಮ್ಮ ಮನದಾಳದ ನೋವುಗಳನ್ನ ಆಲಿಸಿ, ಸಿಹಿ ಹಂಚಿ, ಊಟ ಉಣಬಡಿಸಿದ ಮಾಧವ ನಾಯಕರಿಗೆ ವೃದ್ಧರೆಲ್ಲ ಹರಸಿ, ಜನ್ಮ ದಿನದ ಶುಭಾಶಯ ಕೋರಿದರು. ಸಾಮಾಜಿಕ ಕಾರ್ಯವನ್ನ ಮುಂದುವರಿಸುವಂತೆ ಹಾರೈಸಿದರು.

ಮಾಧವ ನಾಯಕನೆಂಬ ಸಜ್ಜನ ಹುಟ್ಟಿದ ದಿನವಾದ ಅ.10 ನಮಗೆಲ್ಲ ಸಂತೋಷದ, ಸವಿಯಾದ ದಿನ. ಅವರ ಜನ್ಮ ದಿನವನ್ನು ನೊಂದವರ ನಡುವೆ ಆಚರಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮ ನಾಯ್ಕ ಹೇಳಿದರು.

ಸುರಭಿ ವೃದ್ಧಾಶ್ರಮದಲ್ಲಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲೋ ರೆಸಾರ್ಟ್, ಹೋಟೆಲ್‌ಗಳಲ್ಲಿ ಈ ಜನ್ಮ ದಿನವನ್ನು ಆಚರಿಸಿಕೊಳ್ಳಬಹುದಿತ್ತು. ಆದರೆ ಅಂಥ ಜಾಯಮಾನದವರು ಮಾಧವ ನಾಯಕರಲ್ಲ. ಅನಾಥರು, ವೃದ್ಧರು, ಅಬಲರು, ದುಃಖಿಗಳ ಸೇವೆಯೇ ದೇವರ ಸೇವೆಯೆಂದು ತಿಳಿದು ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಮಾಧವ ನಾಯಕ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ಸೇವೆ ಆಯುರಾರೋಗ್ಯವನ್ನ ದೇವರು ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದು ಆಶೀರ್ವದಿಸಿದರು.

300x250 AD

ಮಾಧವ ನಾಯಕ ಅವರು ಮಾತನಾಡಿ, ವೃದ್ಧಾಶ್ರಮಗಳು ಹೆಚ್ಚಾಗುತ್ತಿದೆಯೆಂದರೆ ನಮ್ಮಲ್ಲಿ ಸಂಸ್ಕಾರಗಳು ನಶಿಸಿ ಹೋಗುತ್ತಿದೆ ಎಂದರ್ಥ. ವೃದ್ಧಾಶ್ರಮ ಹೆಚ್ಚಾಯಿತೆಂಬುದು ಹೆಮ್ಮೆಯ ವಿಚಾರವಲ್ಲ. ವೃದ್ಧಾಶ್ರಮಗಳೇ ಇರಬಾರದು, ಅಂಥ ವಾತಾವರಣ ಸೃಷ್ಟಿಯಾಗಬೇಕಿದೆ. ಮಕ್ಕಳಿಗೆ ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸುವ, ಅವರನ್ನು ಪ್ರೀತಿ- ವಾತ್ಸಲ್ಯದಿಂದ ಕಾಣುವ ಸಂಸ್ಕಾರಗಳನ್ನು ಬೆಳೆಸಿದಾಗ ಬಹುಶಃ ಭವಿಷ್ಯದಲ್ಲಿ ವೃದ್ಧಾಶ್ರಮಗಳ ಅವಶ್ಯಕತೆಯೇ ಬರುವುದಿಲ್ಲ ಎಂದರು.

ನನ್ನ ಜನ್ಮ ದಿನವನ್ನು ಈ ಹಿಂದಿನಿAದಲೂ ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಆಚರಿಸಿಕೊಂಡು ಬರುತ್ತಿದ್ದು, ಅದೇ ಸಂಪ್ರದಾಯ ಮುಂದುವರಿಸಿಕೊAಡು ಬರುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ವೃದ್ಧ ತಂದೆ- ತಾಯಿಗಳಿಗೆ ಆಶ್ರಯ ನೀಡುತ್ತಿಲ್ಲ, ಅವರನ್ನು ನೋಡಿಕೊಳ್ಳುತ್ತಿಲ್ಲ. ಬೇರೆ ಬೇರೆ ಕೌಟುಂಬಿಕ ಕಾರಣಗಳಿಗಾಗಿ ಹಿರಿಯರು ಇಂಥ ವೃದ್ಧಾಶ್ರಮಗಳನ್ನು ಸೇರುವಂತಾಗುತ್ತಿದೆ. ದೇವರಿಗೆ ಚಿನ್ನ, ವಜ್ರ- ವೈಢೂರ್ಯಗಳನ್ನ ಕಾಣಿಕೆಯಾಗಿ ನೀಡುವ ಬದಲು, ಅದರಲ್ಲಿ ನೊಂದವರಿಗೆ ನೆರವಾಗುವ ಪ್ರವೃತ್ತಿ ಬೆಳೆಯಬೇಕಿದೆ. ನಾವು ಉಣ್ಣುವ ಅನ್ನದಲ್ಲಿ ಒಂದು ಮುಷ್ಠಿ ಅನ್ನವನ್ನ ಬಡವರಿಗೆ ದಾನ ಮಾಡಿದರೆ ಅದು ನೇರವಾಗಿ ದೇವರಿಗೇ ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಧವ ನಾಯಕ ಅವರ ತಂದೆ ಬಾಬುರಾಯ್ ನಾಯ್ಕ, ತಾಯಿ ಮಂಗಲಾ ನಾಯ್ಕ, ಧರ್ಮಪತ್ನಿ ಸ್ನೇಹಾ ನಾಯಕ, ಪುತ್ರ ಸಿದ್ದಾರ್ಥ, ಪುತ್ರಿ ಯಶಸ್ವಿನಿ, ಚಿಕ್ಕಮ್ಮ ಮಾಧವಿ ನಾಯ್ಕ, ಸುಮಾ ಪಡವಳಕರ್, ಜನಶಕ್ತಿ ವೇದಿಕೆಯ ಪ್ರಮುಖರಾದ ಬಾಬು ಶೇಖ್, ಸಿ.ಎನ್.ನಾಯ್ಕ, ಕಾಶೀನಾಥ್ ನಾಯ್ಕ, ಸೂರಜ್ ಕುರುಮಕರ್, ರಾಘು ನಾಯ್ಕ ಕೇಣಿ, ಸಂದೇಶ್ ನಾಯ್ಕ, ಕೃಷ್ಣ ನಾಯ್ಕ, ಸುರೇಶ್ ನಾಯ್ಕ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top