• Slide
    Slide
    Slide
    previous arrow
    next arrow
  • ಅ.11ಕ್ಕೆ ಜಗಜ್ಯೋತಿ ಶ್ರೀಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮ

    300x250 AD

    ದಾಂಡೇಲಿ: ನಗರದ ಪಟೇಲ್ ವೃತ್ತ ಸಮೀಪದಲ್ಲಿ ನಿರ್ಮಾಣಗೊಂಡಿರುವ ಜಗಜ್ಯೋತಿ ಶ್ರೀಬಸವೇಶ್ವರರ ಮೂರ್ತಿ ಅನಾವರಣ ಕಾರ್ಯಕ್ರಮವು ಅ.11ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಜಗಜ್ಯೋತಿ ಶ್ರೀಬಸವೇಶ್ವರ ಸಮಿತಿಯ ಅಧ್ಯಕ್ಷ ಯು.ಎಸ್.ಪಾಟೀಲ ಅವರು ಹೇಳಿದರು.

    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರ್ತಿ ಅನಾವರಣದ ಬಳಿಕ 11 ಗಂಟೆಗೆ ನಗರದ ಜನತಾ ವಿದ್ಯಾಲಯದ ಕಾಲೇಜು ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಜಗಜ್ಯೋತಿ ಶ್ರೀಬಸವೇಶ್ವರ ಮೂರ್ತಿಯನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಸಿದ್ಧಗಿರಿ ಕನೇರಿಮಠದ ಜಗದ್ಗುರು ಪೂಜ್ಯ ಶ್ರೀಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀಬಸಲಿಂಗ ಮಹಾಸ್ವಾಮಿಗಳು, ಅಥಣಿ ತಾಲೂಕಿನ ಕಕಮರಿಯ ಗುರುದೇವ ಆಶ್ರಮದ ಪೂಜ್ಯ ಶ್ರೀಆತ್ಮಾನಂದ ಮಹಾಸ್ವಾಮಿಗಳು ಹಾಗೂ ಜಮಖಂಡಿ ತಾಲೂಕಿನ ಹುಲ್ಯಾಳ ಗುರುದೇವ ಆಶ್ರಮದ ಪೂಜ್ಯ ಶ್ರೀಹರ್ಷಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

    ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ನೂತನ ವಚನ ಮಂಟಪವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮೂರ್ತಿ ಅನಾವರಣ ಶಿಲೆಯನ್ನು ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಬಸವವನ ಕಾರಂಜಿಯನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶಾಸಕರಾದ ವಿಜಯಪುರದ ಎಂ.ಬಿ.ಪಾಟೀಲ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಆರ್.ವಿ.ದೇಶಪಾಂಡೆಯವರು ವಹಿಸಲಿದ್ದಾರೆ ಎಂದ ಯು.ಎಸ್.ಪಾಟೀಲ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು, ಗಣ್ಯ ಮಹನೀಯರು, ದಾನಿಗಳು ಭಾಗವಹಿಸಲಿದ್ದಾರೆಂದು ಹೇಳಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ಕರ‍್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ಯು.ಎಸ್.ಪಾಟೀಲ್ ಅವರು ಮನವಿ ಮಾಡಿದರು.

    300x250 AD

    ಈ ಸಂದರ್ಭದಲ್ಲಿ ಜಗಜ್ಯೋತಿ ಶ್ರೀಬಸವೇಶ್ವರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಖಜಾಂಚಿ ನಂಜುಡಪ್ಪ ಕೆ.ಬಿ., ಸಮಿತಿಯ ನಿರ್ದೇಶಕರುಗಳಾದ ಅಶೋಕ ಪಾಟೀಲ್ ಮತ್ತು ಎಸ್.ಎಂ.ಪಾಟೀಲ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top