Slide
Slide
Slide
previous arrow
next arrow

ನೆನೆಗುದಿಗೆ ಬಿದ್ದಿರುವ ನಗರ ಅರಣ್ಯ ಅತಿಕ್ರಮಣದಾರರ ಅರ್ಜಿಗಳು: ರವೀಂದ್ರ ನಾಯ್ಕ ಅಸಮಾಧಾನ

300x250 AD

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅನುಷ್ಠಾನಕ್ಕೆ ಬಂದು ಒಂದೂವರೆ ದಶಕಗಳಾದರೂ ನಗರ ಅರಣ್ಯ ಅತಿಕ್ರಮಣದಾರರ ಅರ್ಜಿಗಳು ನೆನೆಗುದಿಗೆ ಬಿದ್ದಿದೆ. ಮಂಜೂರಿ ಪ್ರಕ್ರಿಯೆಗೆ ಸಂಬಂಧಿಸಿ ಯಾವುದೇ ಪ್ರಕ್ರಿಯೆಗಳು ಜರುಗದೇ ಸಂಪೂರ್ಣ ಸ್ಥಗಿತಗೊಂಡಿರುವುದು ವಿಷಾದಕರ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಶಿರಸಿಯಲ್ಲಿ ಹಮ್ಮಿಕೊಂಡಿರುವ ಅರಣ್ಯವಾಸಿಗಳ ಮೆರವಣಿಗೆ ಮತ್ತು ಧರಣಿಗೆ ಸಂಬಂಧಿಸಿ ತಾಲೂಕಿನ ಗಣೇಶನಗರದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಕಾರವಾರ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ತಾಲೂಕಿನ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 8,420 ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ ಬಹುತೇಕ ಜಿಪಿಎಸ್ ಆಗದೇ, ವಾರ್ಡ್ ಸಮಿತಿ ಸಭೆಗಳು ಜರುಗದೇ, ಮಂಜೂರಿ ಪ್ರಕ್ರಿಯೆಗಳು ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಅವರು ಹೇಳಿದರು.

ನಗರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಧುರೀಣರಾದ ಸಂಜೀವ್ ಶೆಟ್ಟಿ, ವಿನೋದ ಸಾವಂತ, ರಾಜು ಮುಕ್ರಿ, ಮಾರುತಿ ಬೋವಿವಡ್ಡರ್, ಕೃಷ್ಣ ಶೆಟ್ಟಿ, ಪ್ರಕಾಶ ಗೋಸಾವಿ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ನಗರ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯಕ್ಕಾಗಿ ಅತಿಕ್ರಮಿಸಿದವರಿಗೆ ಭೂಮಿ ಹಕ್ಕು ದೊರಕದೇ ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ಸರಕಾರದ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು. ಅಶೋಕ ದಾವಣಗೆರೆ, ನಾಗೇಶ ಗೋಸಾವಿ, ಕೃಷ್ಣ ಗಾಂವಕರ ಮುಂತಾದವರು ಉಪಸ್ಥಿತರಿದ್ದರು.

300x250 AD

ಯಲ್ಲಾಪುರ ನಗರದಿಂದ ಅತೀ ಹೆಚ್ಚು ಅರ್ಜಿ; ಉತ್ತರ ಕನ್ನಡ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 213 ವಾರ್ಡ್ ಅರಣ್ಯ ಹಕ್ಕು ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಅತಿಹೆಚ್ಚು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 1750 ಅರ್ಜಿ ಸಲ್ಲಿಸಿರುವುದು ಯಲ್ಲಾಪುರ ನಗರ ಪ್ರದೇಶದಲ್ಲಿ. ತದನಂತರ ಸಿದ್ದಾಪುರ 1391, ಹಳಿಯಾಳ 1570 (ಟೌನ್ ಪಂಚಾಯತ 260, ಕಾರ್ಪೋರೇಶನ್ 1310), ಶಿರಸಿ 1241, ಮುಂಡಗೋಡ 854, ಹೊನ್ನಾವರ 519, ಕುಮಟಾ 414, ಭಟ್ಕಳ 391, ಅಂಕೋಲಾ 270, ಕಾರವಾರ 20 ಅರ್ಜಿಗಳು ವಿಚಾರಣೆ ಇಲ್ಲದೇ ನೆನೆಗುದಿಗೆ ಬಿದ್ದಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top