ಯಲ್ಲಾಪುರ: ಸ್ವಚ್ಛ ಭಾರತ ಸ್ವಸ್ಥ ಭಾರತ ಎನ್ನುವ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ ವಿನ: ಸಾರ್ವಜನಿಕರಲ್ಲಿ ಇನ್ನೂ ಸ್ವಚ್ಚತೆಯ ಪ್ರಜ್ಞೆ ಜಾಗ್ರತವಾಗದೇ ಇರುವುದು ವ್ಯವಸ್ಥೆಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಪೌರ ಕಾರ್ಮಿಕರು ಪಟ್ಟಣದ ಸ್ವಚ್ಚತೆಯ ಬಗ್ಗೆ ನಿತ್ಯ ಶ್ರಮಿಸುತ್ತಾರೆ.ಆದರೆ ಜನರಲ್ಲಿ ಸ್ವಚ್ಚತೆಯ ಕನಿಷ್ಠ ಪ್ರಜ್ಞೆ ಇಲ್ಲದೇ ಇರುವುದರಿಂದ ಅನೈರ್ಮಲ್ಯ ಹೆಚ್ಚುತ್ತಿದೆ.ಇದಕ್ಕೊಂದು ಸಣ್ಣ ನಿದರ್ಶನ ಇಲ್ಲಿದೆ.
ಪಟ್ಟಣದ ತುಂಬ ಸಾಕಷ್ಟು ಕಸದ ತೊಟ್ಟಿಗಳು ಇವೆ.ಅಲ್ಲದೇ ಮನೆ ಮನೆಯ ಹಸಿ,ಒಣ ಕಸ ವಿಲೇವಾರಿ ನಿತ್ಯ ನಡೆಯುತ್ತದೆ.ಹೀಗಿದ್ದಾಗ್ಯೂ, ಪಟ್ಟಣದ ಎಂ.ಎಚ್.ನಾಯ್ಕ ಚಾಳದ ಮೂಲಕ ಕಾಳಮ್ಮನಗರಕ್ಕೆ ಹೋಗುವ ರಸ್ತೆಯ ಪಕ್ಕ ಕಣ್ಣಿಗೆ ರಾಚುವಂತೆ ಪ್ಲಾಸ್ಟಿಕ್ ಕಸ ತ್ಯಾಜ್ಯ ಎಸೆಯಲಾಗಿದೆ.ಅಕ್ಟೋಬರ್ ತಿಂಗಳು ಸಮೀಪಿಸಿದಂತೆ ಸ್ವಚ್ಚತಾ ಅಭಿಯಾನ ದೊಡ್ಡಮಟ್ಟದಲ್ಲಿ ನಡೆಸಲಾಗುತ್ತದೆ.ಆದರೆ ರಸ್ತೆಯಲ್ಲಿಯೇ ಕಸತ್ಯಾಜ್ಯ ಹಾಕಿ ಅಸಹ್ಯಕರ ವಾತಾವರಣ ಸೃಷ್ಠಿ ಸುವವರಿಗೆ ಎನನ್ನಬೇಕೋ ತಿಳಿಯದು.ಎಲ್ಲವನ್ನುವಸರಕಾರದಿಂದಲೇ ಆಗಬೇಕೆಂದು ಬಯಸುವರು ಸುತ್ತಮುತ್ತಲಿನ ಪರಿಸರ ವಠಾರದ ನಿರ್ಮಲತೆಯ ಬಗೆಗೂ ಆದ್ಯತೆ ನೀಡಬೇಕಷ್ಟೇ!