ಭಟ್ಕಳ: ಇಲ್ಲಿನ ಆಸರಕೇರಿ ನಿಚ್ಚಲಮಕ್ಕಿ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಾಣ ಸಂಬಂಧಪಟ್ಟ ವಿಚಾರದಲ್ಲಿ ಶಾಸಕ ಸುನೀಲ ನಾಯ್ಕ ಅವರು ಕ್ಷುಲ್ಲಕ ರಾಜಕಾರಣ ಮಾಡುತ್ತಿಲ್ಲ. ಇದರಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ತಂಜೀ0 ಸಂಸ್ಥೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ತಂಜೀ0 ಪ್ರಮುಖರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸುನೀಲ ನಾಯ್ಕ ಅವರು ಇದೇ ಮೊದಲ ಬಾರಿಗೆ ದೇವಸ್ಥಾನದ ಮಹಾದ್ವಾರ ನಿರ್ಮಾಣ ಮಾಡುತ್ತಿರುವುದಲ್ಲ. ಅವರು ಈಗಾಗಲೇ ಅವರ ವಿಧಾನಸಭಾ ಕ್ಷೇತ್ರದ ಕಿತ್ರೆ ಮಾರುಕೇರಿ ದೇವಸ್ಥಾನ, ಗುಣವಂತೆ ಶಂಭುಲಿಂಗೇಶ್ವರ ದೇವಸ್ಥಾನ, ಮಂಕಿ ತಾಳಮಕ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನ, ಚಿತ್ತಾರ ಜಿನ್ನೋಡ ದೇವಸ್ಥಾನ, ಕಾಸರಗೋಡ ಅಪ್ಸರಗೊಂಡ ದೇವಸ್ಥಾನ ಹಾಗೂ ಸದ್ಯ ನಿರ್ಮಾಣ ಹಂತದಲ್ಲಿದ್ದ ಆಸರಕೇರಿ ದೇವಸ್ಥಾನ ಹೀಗೆ ಇವೆಲ್ಲ ಕಡೆಗಳಲ್ಲಿ ತಮ್ಮ ವೈಯಕ್ತಿಕ ವೆಚ್ಚದಲ್ಲಿ ದೇವಸ್ಥಾನದ ಮಹಾದ್ವಾರ ನಿರ್ಮಾಣ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಆ ಭಾಗಗಳಲ್ಲಿ ಯಾವುದೇ ವಿರೋಧ ಕಂಡುಬಂದಿಲ್ಲ ಎಂದಿದ್ದಾರೆ.
ಆಸರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಮಹಾದ್ವಾರದ ನಿರ್ಮಾಣಕ್ಕೆ ಭೂಮಿಪೂಜೆಯಾದರೂ ವಿರೋಧ ಮಾಡಿಲ್ಲ, ಕಾಮಗಾರಿ ಆರಂಭವಾದಾಗಲು ವಿರೋಧ ಮಾಡಿಲ್ಲ. ಕಾಮಗಾರಿ ಆರಂಭವಾಗಿ ಶೇ 20ರಿಂದ 30ರಷ್ಟು ಆದ ಮೇಲೆ ವಿರೋಧ ಆರಂಭವಾಗಿದೆ. ತಂಜೀ0 ಬೆಂಬಲಿತ ಸದಸ್ಯರೇ ಇದಕ್ಕೆ ಅಡ್ಡಗಾಲು ಹಾಕಿ, ನೀವು ಕಾನೂನು ರೀತಿಯಲ್ಲಿ ಅನುಮತಿ ಪಡೆದು ಮಹಾದ್ವಾರ ಮಾಡಿ. ಇಲ್ಲದೇ ಹೋದರೆ ನಾವು ಟಿಪ್ಪು ಗೇಟ್ ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ ಎಂದರೆ ಇದರಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವವರು ತಂಜೀ0 ಹೊರತು ಶಾಸಕರಲ್ಲ ಎಂದು ಎಂದರು.
ಶಾಸಕರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದು ನಮ್ಮ ಪಕ್ಷಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಮತ್ತು ಅದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಇದಕ್ಕೂ ತಂಜೀ0 ಸಂಸ್ಥೆಗೂ ಯಾವ ರೀತಿ ಸಂಬಂಧವಿಲ್ಲ. ಭಾರತೀಯ ಜನತಾ ಪಕ್ಷದ ಹೈಕಮಾಂಡ್ ತಂಜೀA ಸಂಸ್ಥೆ ಅಲ್ಲ. ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುವ ಅರ್ಹತೆ ತಂಜೀ0 ಸಂಸ್ಥೆಗಿಲ್ಲ. ಇದನ್ನು ನಾವು ಉಗ್ರವಾಗಿ ಖಂಡನೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತರಾಮ, ತಾಲೂಕಾ ಮಂಡಲದ ಉಪಾಧ್ಯಕ್ಷ ಮೋಹನ ನಾಯ್ಕ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಹಿರಿಯ ಮುಖಂಡ ದಿನೇಶ ನಾಯ್ಕ, ಮಂಜುನಾಥ ನಾಯ್ಕ, ಪಾಂಡುರಂಗ ನಾಯ್ಕ ಮುಂತಾದವರು ಇದ್ದರು.
ತಂಜಿಂ ಮುಖಂಡರ ಹೇಳಿಕೆಗೆ ಬಿಜೆಪಿ ಮಂಡಲಾಧ್ಯಕ್ಷರ ತಿರುಗೇಟು
