Slide
Slide
Slide
previous arrow
next arrow

ಇನ್ಸ್ಪೈರ್ ಅವಾರ್ಡ್: ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಗಣೇಶನಗರ ವಿದ್ಯಾರ್ಥಿಗಳು

300x250 AD

ಶಿರಸಿ:ಇತ್ತೀಚೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರಮಟ್ಟದ 2020-21 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಪ್ರೌಢಶಾಲೆ, ಗಣೇಶನಗರದ ವಿದ್ಯಾರ್ಥಿಗಳಾದ ಧನ್ಯ ಆಚಾರಿ, ಸಾಯಿನಾಥ ಮಾಲದಕರ ಮತ್ತು ಸುಮನಾ ಗೋಸಾವಿ ರಾಜ್ಯಮಟ್ಟದ ಸ್ಪರ್ಧೆಯಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.
ಧನ್ಯ ಆಚಾರಿ ಪ್ರದರ್ಶಿಸಿದ ವಿವಿಧ ತೆರೆನ ಬೀಜ ಒಡೆಯುವ ಯಂತ್ರ ಮತ್ತು ಸಾಯಿನಾಥ ಮಾಲದಕರ ತಯಾರಿಸಿದ ಮಣ್ಣನ್ನು ತೆಗೆದು ಗಿಡನೆಡುವ ಸಾಧನಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಲಭಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಸಚಿವರಾದ ಜೀತೆಂದ್ರ ಪ್ರಸಾದ್ ಅವರಿಂದ ಪ್ರಶಸ್ತಿ ಗಳಿಸಿದ್ದಾರೆ: ರಾಷ್ಟ್ರ ಮಟ್ಟದಲ್ಲಿ ಕರ್ನಾಟಕಕ್ಕೆ ಎಂಟು ಪ್ರಶಸ್ತಿಗಳು ಲಭಿಸಿದ್ದು, ಅದರಲ್ಲಿ ಎರಡು ಪ್ರಶಸ್ತಿಗಳು ನಗರದ ಸರ್ಕಾರಿ ಪ್ರೌಢಶಾಲೆ, ಗಣೇಶನಗರಕ್ಕೆ ಲಭಿಸಿರುವುದು ತುಂಬಾ ಪ್ರಶಂಸನೀಯ ಸಂಗತಿಯಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಜಪಾನಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜ್ಞಾನ ಶಿಕ್ಷಕ ಕೆಎಲ್ ಭಟ್ಟರವರ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಈ ಸ್ಪರ್ಧೆಗೆ ಮೂವರು ವಿದ್ಯಾರ್ಥಿಗಳು ಆಯ್ಕಯಾಗಿದ್ದು ಮತ್ತು ರಾಷ್ಟ್ರಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿರುವುದು ವಿಶೇಷ ದಾಖಲೆಯಾಗಿದೆ.
ಈ ಸಾಧನೆಗೆ ಕಾರಣೀಕರ್ತರಾದ ವಿದ್ಯಾರ್ಥಿಗಳನ್ನು, ಮಾರ್ಗದರ್ಶಿ ಶಿಕ್ಷಕ ಕೆ.ಎಲ್. ಭಟ್ಟ ಇವರನ್ನು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪಿ. ಬಸವರಾಜ ಮತ್ತು ಶಿರಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಹೆಗಡೆ ಸನ್ಮಾನಿಸಿ ಗೌರವಿಸಿದ್ದಾರೆ. ಅಭಿಷೇಕ್ ನಾಯ್ಕ ತಾಂತ್ರಿಕ ನೆರವು ನೀಡಿದ್ದಾರೆ, ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಎಲ್ಲರನ್ನು ಕುಮಟಾ ಡಯಟ್ ಪ್ರಾಂಶುಪಾಲ ಎನ್ ಜಿ ನಾಯಕ ಮತ್ತು ಕಿರಿಸಿ ಡಯಟ್ ಪ್ರಭಾರಿ ಪ್ರಾಂಶುಪಾಲರಾದ ಕಲ್ಪನಾ ಶೆಟ್ಟಿಯವರು, ಇನ್ಸ್‌ರ್‌ ಅವಾರ್ಡ್ ನೋಡಲ್ ಅಧಿಕಾರಿಗಳಾದ ಸುರೇಖಾ ನಾಯ್ಕ, ಶಾಲಾ ಎಸ್,ಡಿ,ಎಂ.ಸಿ ಉಪಾಧ್ಯಕ್ಷರಾದ ಪ್ರಕಾಶ್ ಆಚಾರಿ,. ಪ್ರಭಾರಿ ಮುಖ್ಯಾಧ್ಯಾಪಕರು ಆರ್.ಜಿ. ಪಟಗಾರ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top