ಶಿರಸಿ: ಐತಿಹಾಸಿಕ ಕ್ಷೇತ್ರ ಬನವಾಸಿಯ ಶ್ರೀ ಮಧುಕೇಶ್ವರ ರಥ ನಿರ್ಮಾಣ ಸಮಿತಿಯ ಹೆಸರಿನಲ್ಲಿ ಸಚಿವರ ಹಿಂಬಾಲಕನೊಬ್ಬ ರಾಜಕೀಯ ಮಾಡುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಐತಿಹಾಸಿಕ ಕ್ಷೇತ್ರದ ರಥ ನಿರ್ಮಾಣಕ್ಕೆ ಸಚಿವರ ಪ್ರಯತ್ನದಿಂದಲೇ ಸರಕಾರದಿಂದ 3 ಕೋಟಿ ರೂ ಮಂಜೂರಾಗಿದೆ. ಅದು ಸಂತಸದ ವಿಷಯ ಆದರೆ ನಂತರದ ಬೆಳವಣಿಗೆಗಳು ಸ್ಥಳೀಯರಲ್ಲಿ ಬೇಸರ ಹುಟ್ಟಿಸುತ್ತಿದೆ.
ಈ ಹಿಂದೆ ದೇವಸ್ಥಾನ ಅಭಿವೃದ್ಧಿ ಮತ್ತು ಜಾತ್ರೆಯಲ್ಲಿ ಹಗಲು ರಾತ್ರಿ ಪಕ್ಷಾತೀತವಾಗಿ ದುಡಿಯುತ್ತಿರುವ ಭಕ್ತರು ಹಿರಿಯರನ್ನು ಮತ್ತು ದೊಡ್ಡ ಸಮುದಾಯದವರನ್ನು ಕಡೆಗಣಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗದೆ ಇದ್ದವರನ್ನು ಮುಂದೆ ಬಿಟ್ಟು ದೇವಾಲಯ ದೇವರ ಕೆಲಸದಲ್ಲೂ ರಾಜಕೀಯ ಮಾಡುತ್ತಿರುವುದು ಖಂಡನೀಯ. ಸಚಿವರ ಹೆಬ್ಬಾರ ಅವರು ಈ ವಿಷಯದಲ್ಲಿ ಬಹುಸಂಖ್ಯಾತ ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಕೂಡಲೇ ಈ ಬಗ್ಗೆ ಗಮನಹರಿಸಿ ದೇವಾಲಯಗಳ ವಿಚಾರದಲ್ಲಿ ಪ್ರತಿಷ್ಠೆ ತೋರದೆ ಭಕ್ತರ ಪರವಾದ ನಿಲುವುಗಳಿಂದ ಅರ್ಹರಿಗೆ ಜವಾಬ್ದಾರಿ ನೀಡಬೇಕು. ಪಕ್ಷಾತೀತವಾಗಿ ಕೆಲಸ ಕಾರ್ಯಗಳು ಈ ವಿಚಾರದಲ್ಲಿ ನಡೆಯುವಂತಾಗಬೇಕು. ಶೀಘ್ರ ಸರಿಯಾದ ನಿಲುವು ತೆಗೆದುಕೊಳ್ಳದೆ ಇದ್ದಲ್ಲಿ ಅದನ್ನು ಸರಿಪಡಿಸುವುದಕ್ಕಾಗಿ ನಾವು ಹೋರಾಟದ ಹಾದಿ ಹಿರಿಯಬೇಕಾಗುತ್ತದೆ. ಇಲ್ಲವೆ. ಜನಪ್ರತಿನಿಧಿಗಳು ಜನತೆಯ ಹತ್ತಿರ ಹೋಗುವ ಸಮಯ ಸನ್ನಿಹಿತವಾಗುತ್ತಿದ್ದು. ಇಂಥ ನಿರ್ಲಕ್ಷ್ಯಗಳಿಗೆ ಜನ ಆ ಸಂದರ್ಭದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.