• Slide
    Slide
    Slide
    previous arrow
    next arrow
  • ಸದ್ಭಾವನಾದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯ ಚಿಂತನಗೋಷ್ಠಿ

    300x250 AD

    ಶಿರಸಿ : ಶನಿವಾರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ರಸ್ತೆಯ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಸಭಾಭವನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹಾಗೂ ಮಾನಸಿಕ ಒತ್ತಡ ನಿರ್ವಹಣೆಯ ಚಿಂತನ ಗೋಷ್ಠಿ ನಡೆಯಿತು. 

    ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನಾರಾಯಣ ಭಾಗವತ, ಜಿಲ್ಲಾ ಪ್ರಶಸ್ತಿ ಪಡೆದ ಅಬ್ದುಲ್, ಗಿರಿಜಾ ಭಟ್, ವೀಣಾ ಭಟ್ ಇವರನ್ನು ಅಭಿನಂದಿಸಲಾಯಿತು. ಬ್ರಹ್ಮಾಕುಮಾರಿ ವೀಣಾಜಿಯವರು ಮಾನಸಿಕ ಒತ್ತಡ ನಿರ್ವಹಣೆ ಹಾಗೂ ಗುರುವಂದನೆಯ ಕುರಿತು ಪ್ರೊಜೆಕ್ಟರ್ ಮೂಲಕ, ಪ್ರಶ್ನೋತ್ತರದ ಮೂಲಕ ಮಾನಸಿಕ ಒತ್ತಡ ನಿರ್ವಹಣೆಯ ಕುರಿತು ಚಿಂತನ ಗೋಷ್ಠಿ ನಡೆಸಿದರು

    300x250 AD

    ಶಿರಸಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಬಸವರಾಜ, ಶಿರಸಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್.ಎಸ್.ಹೆಗಡೆ, ಪ್ರೌಢಶಾಲಾ ಮುಖ್ಯ ಶಿಕ್ಷಕರು, ಶಿಕ್ಷಣ ಸಂಯೋಜಕರು ಪಾಲ್ಗೊಂಡಿದ್ದರು. 

    Share This
    300x250 AD
    300x250 AD
    300x250 AD
    Leaderboard Ad
    Back to top