Slide
Slide
Slide
previous arrow
next arrow

ಸರ್.ಎಂ.ವಿ ಜನ್ಮದಿನವನ್ನು ಅಭಿಯಂತರ ದಿನವೆಂದು ಆಚರಣೆ: ಅಶೋಕ ಬಂಟ್

300x250 AD

ಯಲ್ಲಾಪುರ: ಭಾರತವು ಇದುವರೆಗೆ ಕಂಡ ಅತ್ಯಂತ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್ ಎಂ.ವಿಶ್ವೇಶ್ವರಯ್ಯನವರು, ಉನ್ನತ ತತ್ವಗಳು ಮತ್ತು ಶಿಸ್ತಿನ ವ್ಯಕ್ತಿಯಾಗಿದ್ದರು. ಆದರ್ಶಪ್ರಾಯ ವ್ಯಕ್ತಿಯಾಗಿದ್ದ ಅವರು ಸರಳ ಜೀವನ ಮತ್ತು ಉನ್ನತ ಚಿಂತನೆಯಲ್ಲಿ ನಂಬಿಕೆ ಇಟ್ಟಿದ್ದರು. ಅಂಥವರ ಜನ್ಮದಿನವನ್ನು ಇಂದು ನಮಗೆ ಎಂಜೀನಿಯರ್ಸ್ ದಿನವನ್ನಾಗಿ ಆಚರಿಸಲು ಹೆಮ್ಮೆಯಾಗುತ್ತದೆ ಎಂದು ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಬಂಟ್ ಹೇಳಿದರು.


ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನದಂದು ಲೋಕೋಪಯೋಗಿ ಕಚೇರಿಯ ಎದುರು ವಿಶ್ವೇಶ್ವರಯ್ಯನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಭಾರತದಾದ್ಯಂತ ಅಭಿಯಂತರ ದಿನವೆಂದು ಆಚರಿಸಲಾಗುತ್ತದೆ. ಈ ದಿನ ನಮಗೆಲ್ಲರಿಗೂ ಪ್ರೇರಣಾ ದಿನವಾಗಿದೆ ಎಂದ ಅವರು, ಸರ್.ಎಂ.ವಿ ಅವರಂತೆ ನಾವು ಕೂಡ ನಿರ್ಮಾಣ ಕಾರ್ಯದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು, ಗುಣಮಟ್ಟವನ್ನು ಕಾಪಾಡುವ ಕೆಲಸ ಮಾಡಬೇಕೆಂದು ಹೇಳಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ವಿಶಾಲ ಕಟಾವಕರ್, ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಎಂಜಿನೀಯರ್ ಮೀನಾಕ್ಷಿ, ಜ್ಯೂನಿಯರ್ ಎಂಜಿನಿಯರಗಳಾದ ನವೀನ ನಾಯ್ಕ, ಸುಷ್ಮಾ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಜ್ಯೂನಿಯರ್ ಎಂಜಿನೀಯರ್ ಪ್ರಮೋದ, ಗುತ್ತಿಗೆದಾರರಾದ ಅಶೋಕ ನಾಯ್ಕ ಹಾಗೂ ನಾಗರಾಜ ಗೊಂದಳಿ ಈ ಸಂದರ್ಭದಲ್ಲಿ ಇದ್ದರು.

300x250 AD
Share This
300x250 AD
300x250 AD
300x250 AD
Back to top