Slide
Slide
Slide
previous arrow
next arrow

ಕಾನಗೋಡ ವಲಯ ಮಟ್ಟದ ಪ್ರತಿಭಾ ಕಾರಂಜಿ

300x250 AD

ಸಿದ್ದಾಪುರ: ತಾಲೂಕಿನ ಐಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನಗೋಡ ವಲಯ ಮಟ್ಟದ ಪ್ರತಿಭಾ ಕಾರಂಜಿ ಅತ್ಯಂತ ಅಚ್ಚುಕಟ್ಟಾಗಿ, ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವರಾಜ ತೆವಳಕರ್ ಮಾತನಾಡಿ, ಪ್ರಾಥಮಿಕ ಹಂತವು ವಿದ್ಯಾರ್ಥಿಗಳ ಆರಂಭಿಕ ಹಂತವಾದ್ದರಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಸೋಲು ಗೆಲವು ಮುಖ್ಯವಲ್ಲ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಜಿ.ಜಿ.ಹೆಗಡೆ ಮಾತನಾಡಿ ಊರಿನವರ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರ ಕಾರ್ಯಕ್ರಮದ ಪೂರ್ವ ತಯಾರಿ, ಅಚ್ಚುಕಟ್ಟುತನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸಾವಿತ್ರಿ ನಾಗರಾಜ ಚಕ್ರಸಾಲಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರೀತಿ ಎಸ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾನಗೋಡ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ ಕೊಡಿಯಾ ಸ್ವಾಗತಿಸಿದರು. ಶಿಕ್ಷಕ ಬಾಬು ನಾಯ್ಕ ಜನರ ತನುಮನ ಧನದ ಸಹಕಾರವನ್ನು ಸ್ಮರಿಸಿದರು. ಮುಖ್ಯ ಶಿಕ್ಷಕ ಎಂ.ಪಿ.ರಾಯ್ಕರ್ ವಂದಿಸಿದರು. ಶಿಕ್ಷಕಿ ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top