ಮುಂಡಗೋಡ: ಭಾರತದ ಅಮೃತ ಮಹೋತ್ಸವ ಅಂಗವಾಗಿ ಭಾರತ ಸೇವಾದಳದ ಶಿರಸಿ ಶೈಕ್ಷಣಿಕ ಜಿಲ್ಲೆ ಶಿರಸಿ ಹಾಗೂ ಮುಂಡಗೋಡ ತಾಲೂಕು ಭಾರತ ಸೇವಾದಳದ ಪದಾಧಿಕಾರಿಗಳು ಪಟ್ಟಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಿ, ಸನ್ಮಾನ ಪತ್ರ ನೀಡಿದರು.
ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಲೀಲಾಬಾಯಿ ಇಂಗಳಕಿಯವರ ಮನೆಗೆ ತೆರಳಿ ಸನ್ಮಾಸಿದರು. ನಂತರ ಪಟ್ಟಣದ ನೂರಾನಿ ಓಣಿಗೆ ತೆರಳಿ ಸ್ವಾತಂತ್ರ್ಯ ಹೋರಾಟಗಾರ ದಿ.ಹನುಮಂತಪ್ಪ ಎಚ್.ಕಲಾಲ ಅವರಿಗೆ ಮರಣೋತ್ತರವಾಗಿ ಅವರ ಧರ್ಮಪತ್ನಿ ರೇಣುಕಾ ಎಚ್.ಕಲಾಲ ಅವರಿಗೆ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾರತ ಸೇವಾದಳ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಂಘಟಕರಾದ ರಾಮಚಂದ್ರ ಹೆಗಡೆ ಸೇರಿದಂತೆ ಭಾರತ ಸೇವಾದಳದ ಪದಾಧಿಕಾರಿಗಳಾದ ಎನ್.ಎಸ್.ಹೆಗಡೆ, ಮಂಜುನಾಥ ಕಲಾಲ, ರಾಮಕೃಷ್ಣ ಮೂಲಿಮನಿ, ವಿದ್ಯಾ ನಾಯಕ್, ಸಿ.ಕೆ.ಅಶೋಕ, ಎಮ್.ಪಿ.ಕುಸೂರ, ರಾಜು ನದಾಫ್, ಈಶ್ವರ ಹನಕನಳ್ಳಿ ಸೇರಿದಂತೆ ಸನ್ಮಾನಿತರಾದ ರೇಣುಕಾ ಕಲಾಲರವರ ಕುಟುಂಬ ವರ್ಗದ ಸದಸ್ಯರು ಇದ್ದರು.
ಭಾರತ ಸೇವಾದಳದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ
