ಕುಮಟಾ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ 8 ದಿನಗಳು ಸಾರ್ವಜನಿಕವಾಗಿ ಪೂಜಿಸಲಾದ ಗಣಪನನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕೊಂಡೊಯ್ದು ವನ್ನಳಿ ಹೆಡ್ ಬಂದರ್‌ನಲ್ಲಿ ವಿಸರ್ಜಿಸಲಾಯಿತು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪೂಜಿಸಲಾದ ಗಣೇಶೋತ್ಸವಕ್ಕೆ ದಶಮಾನೋತ್ಸವದ ಸಂಭ್ರಮ. ಈ ನಿಮಿತ್ತ 8 ದಿನಗಳ ಕಾಲ ಪೂಜಿಸಲಾದ ಸಾರ್ವಜನಿಕ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ ಗಣಪನ ಮೂರ್ತಿಯನ್ನು ಅದ್ಧೂರಿ ಮೆರವಣೆಗೆಯೊಂದಿಗೆ ಪಟ್ಟಣದ ಮೀನು ಮಾರುಕಟ್ಟೆಯ ತಾರಿಬಾಗಿಲಿಗೆ ಕೊಂಡೊಯ್ದು ಅಲ್ಲಿಂದ ಅಳ್ವೆದಂಡೆ ಮೀನುಗಾರರು ದೋಣಿ ಮೂಲಕ ಗಣಪನನ್ನು ವನ್ನಳಿ ಹೆಡ್ ಬಂದರ್‌ಗೆ ಕೊಂಡೊಯ್ದು ವಿಸರ್ಜಿಸಿದರು.
ಮೆರವಣಿಯಲ್ಲಿ ಉಡುಪಿಯ ಹುಲಿ ಕುಣಿತ, ಸಿದ್ದಿ ಜನಾಂಗದ ದಮಾಮಿ ನೃತ್ಯ, ಬೆಳಗಾವಿ ಹಾಗೂ ಕೊಲ್ಲಾಪುರದ ಡೊಲ್ಲು ವಾದ್ಯ, ಪೂಣಾದ ರಾಜಶ್ರೀ ಭಾಗ್ವತ್ ಅವರ ರಂಗೋಲಿ, ನವಿಲು, ಗೊಂಬೆ ನೃತ್ಯ ಸೇರಿದಂತೆ ಪ್ರಧಾನಿ ಮೋದಿ ಸೇರಿದಂತೆ ವಿವಿಧ ವೇಷಧಾರಿಗಳ ಸ್ತಬ್ದ ಚಿತ್ರಗಳ ಮೆರಣಿಗೆ ಮತ್ತು ಸಿಡಿ ಮದ್ದು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ಬಸ್ತಿಪೇಟೆ ಮಾರ್ಗವಾಗಿ ಸುಭಾಸ ರಸ್ತೆ ಮೂಲಕ ಸಂಚರಿಸಿದ ಮೆರವಣಿಗೆ ಪಟ್ಟಣದ ಮೀನು ಮಾರುಕಟ್ಟೆಯ ತಾರಿಬಾಗಿಲಿನಲ್ಲಿ ಸಮಾವೇಶಗೊಂಡಿತು. ಅಲ್ಲಿಂದ ದೋಣಿ ಮೂಲಕ ಗಣಪನ್ನು ವನ್ನಳಿ ಹೆಡ್ ಬಂದರ್‌ಗೆ ಕೊಂಡೊಯ್ದು ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಜನರು ಗಣಪತಿ ಬೊಪ್ಪ ಮೋರಯ ಮಂಗಳಮೂರ್ತಿ ಮೋರಯ ಎನ್ನುವ ಮೂಲಕ ಗಣಪನಿಗೆ ಅಂತೀಮ ವಿದಾಯ ಸಲ್ಲಿಸಿದರು. ಪಲಾವಳಿ, ದೇವರ ಆಭರಣ ಮತ್ತು ಪ್ರಸಾದಗಳ ಸವಾಲನ್ನು ಬರೋಬ್ಬರಿ 8.53 ಲಕ್ಷ ರೂ.ಗೆ ಭಕ್ತರು ಪಡೆದರು.