• Slide
    Slide
    Slide
    previous arrow
    next arrow
  • ಲಕ್ಕಿಸವಲಲ್ಲಿ ‘ಚವತಿಚಂದ್ರ’ ತಾಳಮದ್ದಲೆ

    300x250 AD

    ಸಿದ್ದಾಪುರ: ಸೇವಾರತ್ನ ಮಾಹಿತಿ ಕೇಂದ್ರ ಕಾನಸೂರು ತನ್ನ 23ನೇ ವರ್ಷದ ಯಕ್ಷ ಪಂಚಕ ಕಾರ್ಯಕ್ರಮದ ಅಂಗವಾಗಿ ಲಕ್ಕಿಸವಲು ಗಜಾನನ ಹೆಗಡೆಯವರ ಮನೆಯಲ್ಲಿ ‘ಯಕ್ಷಗಾನ ವಿದ್ವಾಂಸ ಗೌರವ ಸನ್ಮಾನ’ ಹಾಗೂ ‘ಚವತಿಚಂದ್ರ’ ತಾಳಮದ್ದಲೆಯನ್ನು ಸಂಪನ್ನಗೊಳಿಸಿತು.

    ಸನ್ಮಾನ ಕಾರ್ಯಕ್ರಮದಲ್ಲಿ ಸೇವಾರತ್ನ ಕೇಂದ್ರದ ರತ್ನಾಕರ ಭಟ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಯಕ್ಷಗಾನ ವಿಧ್ವಾಸ, ಅರ್ಥದಾರಿ, ಸಾಹಿತಿ, ಶಿಕ್ಷಣತಜ್ಞ, ನಿವೃತ್ತ ಡೀನ್ ಡಾ.ಜಿ.ಎ.ಹೆಗಡೆ ಸೋಂದಾ ಅವರು ಯಕ್ಷಗಾನ ಕ್ಷೇತ್ರಕ್ಕೆ ನಿರಂತರವಾಗಿ ನೀಡುತ್ತಿರುವ ಕೊಡುಗೆಗಳನ್ನು ಗುರುತಿಸಿ ಅದನ್ನು ವಿವರಿಸಿ, ವಿದ್ಯುಕ್ತವಾಗಿ ಸನ್ಮಾನಿಸಲಾಯಿತು.

    ತನ್ನ ಜೀವಂತಿಕೆಯ ಮೂಲಕ ನಮ್ಮ ಅಂತರಂಗದೊಂದಿಗೆ ಸಂವಾದ ನಡೆಸುವ ಗುಣವುಳ್ಳ ಕಲೆ ಯಕ್ಷಗಾನ. ಯಕ್ಷಗಾನದ ರಂಗ ಎಂದರೆ ಬದುಕನ್ನೇ ಜೀವನ್ಮುಖಿಯಾಗಿಸಿ ಅವಿನಾಭಾವ ಸಂಬಂಧವನ್ನು ಅನುಸಂಧಾನಗೊಳಿಸುವ ಶ್ರೀಮಂತಿಕೆ ಇರುವ ಉತ್ತುಂಗರಂಗ, ಯಕ್ಷಗಾನವು ಸದಾಪ್ರಯೋಗ ರೂಪದಲ್ಲಿಯೇ ಇರುವ ಬಹುದೊಡ್ಡ ಸಿಂಧು, ಅದರಲ್ಲಿ ನಾನೊಂದು ಬಿಂದು ಎಂದು ಸೋಂದಾ ಹೇಳಿದರು.

    ಶಿರಸಿಯ ಮುಕ್ತಕಕವಿ, ಸಾಹಿತಿ ಕೃಷ್ಣ ಪದಕಿ ಮಾತನಾಡಿ, ತಾಳಮದ್ದಲೆಯ ಕಲೆಯು ನಳಪಾಕದಂತಿಹುದು. ಕೇಳುತ್ತ ಸವಿಯುವವರಿಗೆ ಹಬ್ಬದೂಟವು, ಕೂಟಗಳು ನೀಡುತಿಹ ವಿಧ ವಿಧದ ಆಖ್ಯಾನಗಳು ಬಾಳಿಗೊಂದು ಆಸರೆಯು – ಸುಂದಕುವರ ಎಂಬ ತಮ್ಮ ಮುಕ್ತಕವನ್ನು ಉದ್ಘರಿಸಿ ವಿಶ್ಲೇಶಿಸಿ ಮಾತನಾಡಿದರು. ಸನ್ಮಾನಿತ ಡಾ.ಜಿ.ಎ.ಹೆಗಡೆ ಸೋಂದಾ ಅವರದು ಬಹುಮುಖ ಪ್ರತಿಭೆ ಎಂದು ಅವರ ಗುಣಗಾನ ಮಾಡಿ ಅಭಿನಂದನೆ ಸಲ್ಲಿಸಿದರು.

    300x250 AD

    ನಂತರ ನಡೆದ ‘ಚವತಿಚಂದ್ರ’ ತಾಳಮದ್ದಲೆಯಲ್ಲಿ ಕೃಷ್ಣನಾಗಿ ಡಾ.ಜಿ.ಎ.ಹೆಗಡೆ ಸೋಂದಾ ಸೊಗಸಾದ ಉಪಮೆ ದೃಷ್ಟಾಂತಗಳನ್ನು ಉದಾಹರಿಸುತ್ತ ಕಥಾನಾಯಕ ಕೃಷ್ಣನ ಪಾತ್ರದಲ್ಲಿ ರಂಜಿಸಿದರು. ಹಿರಿಯ ಅರ್ಥದಾರಿ ಕೆ.ಬಿ.ಹೆಗಡೆ ಹಸರಗೋಡ, ಜಾಂಬವನಾಗಿ ವಿಜೃಂಭಿಸಿದರು. ಬಲರಾಮನಾಗಿ ಗಣಪತಿ ಭಟ್ಟ ವರ್ಗಾಸರ, ನಾರದನಾಗಿ ವಿ. ರಾಮಚಂದ್ರ ಭಟ್ಟ ಶಿರಳಗಿ ರಂಜಿಸಿದರು. ಸತ್ರಾಜಿತನಾಗಿ ರತ್ನಾಕರ ಭಟ್ಟ ಕಾನಸೂರು, ಪ್ರಸೇನನಾಗಿ ಆನಂದ ಶಿಗೆಹಳ್ಳಿ, ಜಾಂಬವತನಾಗಿ ವಿ. ಚಿದಂಬರ ಲಕ್ಕಿಸವಲು, ದೂತನಾಗಿ ಚಂದ್ರಶೇಖರ ಹೆಗಡೆ ಮಾದನಕಳ್ಳು ಪಾತ್ರವಹಿಸಿ ತಾಳಮದ್ದಲೆಗೆ ತಾರ್ತಿಕ ಸೊಬಗನ್ನು ತಂದರು.

    ಹೃದಯಸ್ವರ್ಶಿ ಹಿಮ್ಮೇಳ ವೈಭವವನ್ನು ನೀಡಿದ ಶ್ರೀಧರ ಭಾಗವತ ಹಣಗಾರ, ಶ್ರೀಪತಿ ಹೆಗಡೆ ಕಂಚಿಮನೆ, ಪ್ರಶಂಸಾರ್ಹರಾದರು. ಗಜಾನನ ಹೆಗಡೆ ಲಕ್ಕಿಸವಲು ಉತ್ತಮ ಆತಿಥ್ಯ ಮತ್ತು ಕಲಾಗೌರವವನ್ನು ಕಲಾವಿದರಿಗೆ ನೀಡಿ ಗೌರವಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top