• Slide
    Slide
    Slide
    previous arrow
    next arrow
  • ಪ್ರಭಾಕರ ರಾಣೆ ನಿಧನಕ್ಕೆ ಗಣ್ಯರ ಕಂಬನಿ

    300x250 AD

    ಹಳಿಯಾಳ: ಕಾರವಾರ- ಜೊಯಿಡಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ಜನ ಸೇವೆ ಸಲ್ಲಿಸಿದ್ದ ಮಾಜಿ ಶಾಸಕರು, ಸಚಿವರು, ಪಕ್ಷದ ಹಿರಿಯ ನಾಯಕರು, ಆತ್ಮೀಯರು ಆಗಿದ್ದ ಪ್ರಭಾಕರ ರಾಣೆ ಅಸ್ತಂಗತರಾಗಿರುವ ಸುದ್ದಿ ತುಂಬಾ ಆಘಾತವನ್ನುಂಟು ಮಾಡಿದೆ ಎಂದು ಶಾಸಕ ದೇಶಪಾಂಡೆ ಹೇಳಿದ್ದಾರೆ.

    ಶಿಕ್ಷಣ ಪ್ರೇಮಿಯಾಗಿದ್ದ ಪ್ರಭಾಕರ್ ರಾಣೆಯವರು ಕಾರವಾರ- ಜೊಯಿಡಾ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣಿಕರ್ತರು. ವಯಸ್ಕರ ಶಿಕ್ಷಣ ಸಚಿವರಾಗಿ ಉತ್ತಮ ಆಡಳಿತ ನಡೆಸಿ ರಾಜ್ಯಾದ್ಯಂತ ಮನೆಮಾತಾಗಿದ್ದರು. ಇಂಥ ಸರಳ ಸಜ್ಜನ ವ್ಯಕ್ತಿತ್ವದ ರಾಣೆಯವರ ಅಗಲಿಕೆ ಅವರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಇವರ ನಿಧನದಿಂದ ರಾಜ್ಯವು ಸರಳ, ಸಜ್ಜನ ಹಾಗೂ ಒಳ್ಳೆಯ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

    ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top