Slide
Slide
Slide
previous arrow
next arrow

ಪ್ರೇಕ್ಷಕರ ಮನ ರಂಜಿಸಿದ ಸತ್ಯ ಹರಿಶ್ಚಂದ್ರ ಯಕ್ಷಗಾನ

300x250 AD

ಯಲ್ಲಾಪುರ: ತಾಲೂಕಿನ ಕಳಚೆಯ ಸರ್ವೋದಯ ಸಭಾಭವನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಂಡ ಸತ್ಯ ಹರಿಶ್ಚಂದ್ರ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಭಟ್ಟ ಬಾಳ್ಕಲ್, ಮದ್ದಲೆವಾದಕರಾಗಿ ರಾಘವೇಂದ್ರ ಹೆಗಡೆ ತೂಕದಬೈಲ್, ಚಂಡೆವಾದಕರಾಗಿ ಪ್ರಮೋದ ಕಬ್ಬಿನಗದ್ದೆ ಭಾಗವಹಿಸಿದ್ದರು.

300x250 AD

   ಹರಿಶ್ಚಂದ್ರನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ವಿಶ್ವಾಮಿತ್ರನಾಗಿ ಶ್ರೀಪಾದ ಭಟ್ಟ ಥಂಡಿಮನೆ, ನಕ್ಷತ್ರಿಕನಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಚಂದ್ರಮತಿಯಾಗಿ ಸುಬ್ರಮಣ್ಯ ಯಲಗುಪ್ಪ, ವಸಿಷ್ಠನಾಗಿ ಈಶ್ವರ ನಾಯ್ಕ ಮಂಕಿ, ದೇವೇಂದ್ರ ಹಾಗೂ ವೀರಬಾಹುವಾಗಿ ವಿನಾಯಕ ಭಟ್ಟ ಶೇಡಿಮನೆ, ಮಾತಂಗ ಕನ್ಯೆಯಾಗಿ ಸದಾಶಿವ ಮಲವಳ್ಳಿ, ಬ್ರಾಹ್ಮಣನಾಗಿ ಅನಂತ ಗದ್ದೆ, ಈಶ್ವರನಾಗಿ ದೀಪಕ ಭಟ್ಟ ಕುಂಕಿ, ಲೋಹಿತಾಶ್ವನಾಗಿ ವರುಣ ಕಲಾವನ ಪಾತ್ರ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top