Slide
Slide
Slide
previous arrow
next arrow

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ತೂಗುಸೇತುವೆ: ದುರಸ್ತಿಗೆ ಆಗ್ರಹ

300x250 AD

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಅಪಾಯಕ್ಕೆ ಆಹ್ವಾನದಂತಾಗಿದ್ದು, ಸಂಚರಿಸುವಾಗ ಜೀವ ಭಯದಲ್ಲಿ ತೆರಳಬೇಕಾದ ಸ್ಥಿತಿ ಎದುರಾಗಿದೆ.
20 ವರ್ಷಗಳ ಹಿಂದೆ ಎರಡು ಊರನ್ನು ಒಂದು ಮಾಡಿದ್ದ ಸೇತುವೆ ಇದೀಗ ಪ್ರಾಣಕ್ಕೆ ಸಂಚಕಾರ ತರುವಂತಿದ್ದು, ಸೇತುವೆ ಸರಿಪಡಿಸುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಟೂರಿಸ್ಟ್ ಸ್ಪಾಟ್ ಆಗಿ, ಫೊಟೊಶೂಟ್ ತಾಣವಾಗಿ ಪ್ರಸಿದ್ಧಿ ಪಡೆದಿದ್ದ ಕರ್ಕಿ ಸೇತುವೆ ಇದೀಗ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಒಳಬಂದರೆ ಅನತಿ ದೂರದಲ್ಲಿರುವ ಈ ಸೇತುವೆ, ಒಂದು ಬದಿಯಲ್ಲಿ ಕರ್ಕಿ, ಇನ್ನೊಂದು ಬದಿಯಲ್ಲಿ ಪಾವಿನಕುರ್ವೆ ಗ್ರಾಮವನ್ನ ಸಂಪರ್ಕಿಸುತ್ತದೆ. ಈ ತೂಗುಸೇತುವೆಯ ಕೆಳಗಡೆ ಬಡಗಣಿ ನದಿ ಹರಿಯುತ್ತದೆ. ಸುಂದರ ವಿಹಂಗಮ ನೋಟ ಇಲ್ಲಿದ್ದರೂ ಸಹ, ಇತ್ತೀಚಿಗಂತೂ ಈ ಸೇತುವೆಯ ದುಃಸ್ಥಿತಿಯ ಕಂಡು ಗ್ರಾಮಸ್ಥರೇ ಸಂಚರಿಸಲು ಭಯಪಡುವಂತಾಗಿದೆ. ಪಾವಿನಕುರ್ವಾದಲ್ಲಿ ನೂರಾರು ಕುಟುಂಬ ವಾಸವಿದ್ದು, ಹೆಚ್ಚಿನವರು ಮೀನುಗಾರ ಸಮುದಾಯದವರಾಗಿದ್ದು, ರಾತ್ರಿ ವೇಳೆ ಇದೇ ಸೇತುವೆಯ ಮೇಲೆ ಸಂಚರಿಸಬೇಕಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಸೇತುವೆ ಮೇಲೆ ಜೀವಭಯದಲ್ಲೇ ಪಟ್ಟಣಕ್ಕೆ ತೆರಳಿ ಮರಳಬೇಕಿದೆ.

ಕೋಟ್…
ಸೇತುವೆಗೆ ಹಾಕಲಾಗಿರುವ ಹಲಗೆಗಳು ಹಾಳಾಗಿ ನೇರವಾಗಿ ಕಾಲು ಕೆಳಕ್ಕೆ ಹೋಗುವಂತಾಗಿದೆ. ಅಪಾಯ ಸಂಭವಿಸಿದ ಬಳಿಕ ಸ್ಥಳಕ್ಕಾಗಮಿಸುವ ಅಧಿಕಾರಿಗಳು ಜನಪ್ರತಿನಿಧಿಗಳು ಈಗಲೇ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
• ತುಕಾರಾಮ ನಾಯ್ಕ, ತಾಲೂಕು ಪಂಚಾಯತಿ ಮಾಜಿ ಸದಸ್ಯ

ಪಾವಿನಕುರ್ವಾ ಗ್ರಾಮದಲ್ಲಿ ವಾಸಿಸುತ್ತಿರುವ ಹೆಚ್ಚಿನವರು ಮೀನುಗಾರರು, ಕೂಲಿಕಾರರು. ಹೀಗಾಗಿ ಸಮಯದ ಪರಿವೇ ಇಲ್ಲದೇ ತಮ್ಮ ದುಡಿಮೆಗಾಗಿ ಪಟ್ಟಣಕ್ಕೆ ಓಡಾಡುತ್ತಿರುತ್ತಾರೆ. ಹೀಗೆ ಓಡಾಟಕ್ಕೆ ಇರುವ ಏಕೈಕ ದಾರಿಯೆಂದರೆ ಈ ತೂಗು ಸೇತುವೆ. ಅಲ್ಲದೆ ಗ್ರಾಮದ ಮಕ್ಕಳು ಶಾಲಾ- ಕಾಲೇಜುಗಳಿಗೆ ತೆರಳಲು ಕೂಡ ಇದೇ ತೂಗು ಸೇತುವೆಯನ್ನೇ ಬಳಸಿ ಪಟ್ಟಣಕ್ಕೆ ತೆರಳಬೇಕಿದ್ದು, ಸೇತುವೆ ಜೀರ್ಣಾವಸ್ಥೆ ತಲುಪಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ.
• ಹೈದರ್ ಅಲಿ, ಪಾವಿನಕುರ್ವಾ ಗ್ರಾಮಸ್ಥ

300x250 AD

ಗ್ರಾಮ ಪಂಚಾಯತಿಯಿಂದ ಸಾಧ್ಯವಾದಷ್ಟು ಸೇತುವೆಯ ಹಾಳಾದ ಹಲಗೆಗಳನ್ನು ಅಳವಡಿಸಲಾಗಿದೆ. 15 ದಿನಗಳಲ್ಲಿ 28 ಸಾವಿರ ರೂ.ಗಳ ಹಲಗೆ ಅಳವಡಿಸಲಾಗಿದೆ. ಆದರೆ ಎಲ್ಲಾ ಹಲಗೆಗಳನ್ನು ಬದಲಿಸುವ ಅವಶ್ಯಕತೆ ಇರುವುದರಿಂದ ಈಗಾಗಲೇ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ.
• ಕಿರಣಕುಮಾರ್, ಪಾವಿನಕುರ್ವಾ ಪಿಡಿಒ

Share This
300x250 AD
300x250 AD
300x250 AD
Back to top