Slide
Slide
Slide
previous arrow
next arrow

ವಿದ್ಯಾರ್ಥಿಗಳು ಪ್ರಸಕ್ತ ವಿದ್ಯಮಾನಗಳ ಜ್ಞಾನ ವೃದ್ಧಿಸಿಕೊಳ್ಳಿ: ಉಪೇಂದ್ರ ಪೈ

300x250 AD

ಶಿರಸಿ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರಸಕ್ತ ವಿದ್ಯಮಾನಗಳ ಜ್ಞಾನ ಅತ್ಯವಶ್ಯಕ. ಇಂತಹ ಜ್ಞಾನವನ್ನು ವೃದ್ಧಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಬೇಕಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ಅವರು ನಗರದ ಯೂನಿಯನ್ ಪ್ರೌಢಶಾಲೆಯ 30 ಬಡ ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತ ಸಮವಸ್ತ್ರ ವಿತರಿಸಿ ನಂತರ ಮಾತನಾಡಿದ ಅವರು ಶಿಕ್ಷಕರು ಸರ್ವೋತೋಮುಖ ಅಭಿವದ್ದಿಗೆ ಪೂರಕವಾಗಿ ತಮ್ಮ ಪಾಲಿನ ಪಾಠ ಕಲಿಸುವ ಜತೆ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷರ ಮೇಲಿದೆ ಎಂದರು.

ಶಿಕ್ಷಕರ ಜತೆಗೆ ವಿದ್ಯಾರ್ಥಿಗಳ ಪೊಷಕರು ಸಹ ಮಕ್ಕಳ ಕಲಿಕೆಗೆ ಆಸಕ್ತಿ ತೋರಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವದು ಬೇಡ. ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಿ ವಿದ್ಯೆ ಯಾರು ಕಸಿದುಕೊಳ್ಳಲಾರದ ಸಂಪತ್ತು. ಅಕ್ಷರ ಜ್ಞಾನ ಎಲ್ಲ ಕಾಲಕ್ಕೂ ಕೈ ಹಿಡಿಯುತ್ತದೆ. ಹೀಗಾಗಿ ಮಕ್ಕಳು ಕಷ್ಟಪಟ್ಟು ಓದಿ ಮುಂದೆ ಬರುವ ಮೂಲಕ ಹೆತ್ತವರಿಗೆ ಗುರು ಹಿರಿಯರಿಗೆ ನಮ್ಮ ತಾಲೂಕಿಗೆ ಹಾಗೂ ಜಿಲ್ಲೆಗೆ ರಾಜ್ಯ ದೇಶಕ್ಕೆ ಉತ್ತಮ ಹೆಸರು ತಂದು ಕೊಡುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪದಕ ನೀಡಿ ಗೌರವಿಸಿದರು, ಹಾಗೂ ದೈಹಿಕ ಶಿಕ್ಷಕ ಅಬ್ದುಲ್ ಮತೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು 

300x250 AD

ಸ೦ಸ್ಥೆಯ ಅಧ್ಯಕ್ಷ ಬಾಷಾ ಶೇಖ ಮಾತನಾಡಿ ಮಕ್ಕಳು ನಿತ್ಯ ತಪ್ಪದೆ ಶಾಲೆಗೆ ಆಗಮಿಸಿ ಹಾಜರಾತಿಯನ್ನು ಹೆಚ್ಚಿಸುವುದು ಕೂಡ ಮಹತ್ವದ್ದಾಗಿದೆ. ಆದ್ದರಿಂದ ಪಾಲಕ ಪೋಷಕರು ವಿಶೇಷವಾದ ಖಾಳಜಿವಹಿಸಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ದೇಶದ ಸತ್ಪ್ರಜೆಯನ್ನಾಗಿ ರೂಪಿಸಿ ಎಂದು ಸಲಹೆ ನೀಡಿದರು. ಶಿಕ್ಷಕ ಅಬ್ದುಲ್ ಖಾಜಿ ಕಾರ್ಯಕ್ರಮ ನಿರೂಪಿಸಿದರು ಈ ಸಂಧರ್ಭದಲ್ಲಿ ಸ೦ಸ್ಥೆಯ ಸದಸ್ಯರು ಮೊಹಮ್ಮದ ಸಾಬ್, ಜಬೀಉಲ್ಲಾ ಖಾನ್, ಇಬ್ರಾಹಿಂ ಖಾನ್, ಮೌಲಾ ಅಲಿ, ಶಿಕ್ಷಕಿ ಖುತೇಜಾ ಜವಳಿ, ಫಾಮಿದಾ ಜವಳಿ, ತೆಹಸೀನ ಗೋಡಿಯಾಳ,ಮುಸ್ಕಾನ್ ಜವಳಿ , ರಾಘವೇಂದ್ರ ಸಂಗನಾಳ, ಅಶ್ಪಾಕ್ ಶೇಖ್,ಅಕ್ಷಯ ನಾಯ್ಕ, ಪಾಲಕರು ಹಾಗೂ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top