Slide
Slide
Slide
previous arrow
next arrow

ಚಲಿಸುತ್ತಿದ್ದ ರೈಲಿನಲ್ಲಿ ದರೋಡೆ: ಪ್ರಕರಣ ದಾಖಲು

300x250 AD

ಕಾರವಾರ: ಚಲಿಸುತ್ತಿದ್ದ ರೈಲಿನಲ್ಲಿ ಕಾರವಾರದ ಮಹಿಳೆಯೋರ್ವರ 8 ಲಕ್ಷ ರು.ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್‌ನ್ನು ದರೋಡೆ ಮಾಡಿ ಪರಾರಿಯಾದ ಘಟನೆ ಬೆಂಗಳೂರು-ಕಾರವಾರ ರೈಲಿನಲ್ಲಿ ನಡೆದಿದೆ.

ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ರೈಲಿನಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ರಾತ್ರಿ ವೇಳೆ ಪುತ್ತೂರು ರೈಲು ನಿಲ್ದಾಣಕ್ಕೆ ಸಮೀಪದ 1ಕಿ. ಮಿ ದೂರ ಹಾರಾಡಿ-ಸಿಟಿಗುಡ್ಡೆ ನಡುವಿನ ಸ್ಥಳದಲ್ಲಿ ಆ.30ರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದೆ. ಕಾರವಾರ ಮೂಲದ ಬೆಂಗಳೂರಿನಲ್ಲಿ ವಾಸವಾಗಿರುವ ಅಧ್ಯಾಪಕ ರಮೇಶ ಮತ್ತು ಅವರ ಪತ್ನಿಯೇ 40 ಸಾವಿರ ರು.ನಗದು ಹಾಗೂ 8 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಇದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡವರು.

300x250 AD

ಆ. 29 ರಾತ್ರಿ ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲು ಕಬಕ ಪುತ್ತೂರು ನಿಲ್ದಾಣಕ್ಕೆ ರಾತ್ರಿ 2. 20 ಕ್ಕೆ ತಲುಪಿತ್ತು. 2, 30 ಕ್ಕೆ ಅಲ್ಲಿಂದ ಕಾರವಾರಕ್ಕೆ ಹೊರಟ ವೇಳೆ ರೈಲು ಪುತ್ತೂರು ಹಾರಾಡಿ ಸೇತುವೆ ದಾಟಿ ಮುಂದೆ ಸಿಟಿಗುಡ್ಡೆ ತಲುಪುತ್ತಿದ್ದಂತೆ ನಿರ್ಮಲಾ ತಮ್ಮ ತಲೆಯ ಅಡಿಯಲ್ಲಿ ಇಟ್ಟುಕೊಂಡಿದ್ದ ವ್ಯಾನಿಟಿ ಬ್ಯಾಗ್‌ನ್ನು ಎಳೆಯಲು ಯತ್ನಿಸಿದ್ದ. ಇದು ಗಮನಕ್ಕೆ ಬಂದೊಡನೆ  ಆ ವ್ಯಕ್ತಿಯನ್ನು ಮಹಿಳೆ ತಳ್ಳಿದ್ದಾರೆ.ಈ ವೇಳೆ ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ತುಂಡಾಗಿ ಚಿನ್ನಾಭರಣವಿದ್ದ ಬ್ಯಾಗು ಕಳ್ಳನ ಕೈ ಸೇರಿತ್ತು. ಆಗ ಆತ ರೈಲಿನಿಂದ ಹಾರಲು ಯತ್ನಿಸಿದಾಗ ಮಹಿಳೆ ಆತನನ್ನು ಹಿಡಿದು ರೈಲಿನ ಚೈನು ಎಳೆಯಲು ಪ್ರಯತ್ನಿಸಿದ್ದಾರೆ. ಆಗ ಆಕೆಯೂ ಆಯ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಆರೋಪಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ.ಮಹಿಳೆಯೂ ರೈಲಿನ ಹಳಿಯ ಮೇಲೆ ಬಿದ್ದು ಗಾಯಗೊಂಡಿದ್ದಾರೆಂದು ಹೇಳಲಾಗಿದೆ. ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಧ್ಯಾಪಕ ರಮೇಶ ಮತ್ತು ಆತನ ಪತ್ನಿ ನೀಡಿದ ದೂರಿನಂತೆ ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top