ಭಟ್ಕಳ: ಇತ್ತೀಚಿಗೆ ಬೆಳ್ಕೆ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸೋನಾರಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೋನಾರಕೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅದ್ಭುತ ಸಾಧನೆ ತೋರಿ ಮೊದಲ ಬಾರಿಗೆ ಕೀರ್ತಿಪತಾಕೆ ಹಾರಿಸಿದ್ದಾರೆ.
ಯೋಗ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರ ಗುಂಪು ಸಮಗ್ರ ವೀರಾಗ್ರಣಿ ಪ್ರಶಸ್ತಿ, ಬಾಲಕಿಯರ ಖೋಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಲಕರ ಖೋಖೋ ದ್ವಿತೀಯ ಸ್ಥಾನ, ಚೆಸ್‌ನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು, ಹರ್ಡಲ್ಸ್ನಲ್ಲಿ ಸಂಪ್ರೀತಾ ಪ್ರಥಮ, ಉದ್ದ ಮತ್ತು ಎತ್ತರ ಜಿಗಿತದಲ್ಲಿ ದ್ವಿತೀಯ, ಬಿಬಿ ಮರಿಯಮ್ ಚಕ್ರ ಎಸೆತ, ಗುಂಡು ಎಸೆತ, ಜಾವಲಿನ್‌ನಲ್ಲಿ ತೃತೀಯ, ನಾಗರತ್ನ 3000 ಮೀ. ಓಟದಲ್ಲಿ ಪ್ರಥಮ, ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ, ಅಶ್ವಿನಿ ನಡಿಗೆಯಲ್ಲಿ ಪ್ರಥಮ, 3000 ಮೀ. ಓಟದಲ್ಲಿ ದ್ವಿತೀಯ, ಅಂಜಲಿ 1500 ಮೀಟರ್ ಓಟದಲ್ಲಿ ಪ್ರಥಮ, ಸಾಕ್ಷಿ 400 ಮೀಟರ್ ಓಟದಲ್ಲಿ ತೃತೀಯ, ಮಹಮ್ಮದ್ ರಿಯಾಜ್ 200 ಮೀ. ಹಾಗೂ 400 ಮೀ. ಓಟದಲ್ಲಿ ದ್ವಿತೀಯ, ಧೀರಜ ಹರ್ಡಲ್ಸ್ನಲ್ಲಿ ದ್ವಿತೀಯ, ಪ್ರಜ್ವಲ್ ಚೆಸ್‌ನಲ್ಲಿ ಪ್ರಥಮ, ಆದಿತ್ಯ ಹರ್ಡಲ್ಸ್ನಲ್ಲಿ ತೃತೀಯ, ಜಾಕ್ಸನ್ 800 ಮೀ. ಓಟದಲ್ಲಿ ಪ್ರಥಮ, ಉದಯ ನಡಿಗೆಯಲ್ಲಿ ಪ್ರಥಮ 3000 ಮೀ. ಓಟದಲ್ಲಿ ತೃತೀಯ, ಪ್ರದೀಪ 2000 ಮೀ. ಓಟದಲ್ಲಿ ತೃತೀಯ, ಯೋಗೇಶ 3000 ಮೀ. ಓಟದಲ್ಲಿ ಪ್ರಥಮ, ನಡಿಗೆಯಲ್ಲಿ ದ್ವಿತೀಯ, ಪ್ರವೀಣ ಜಾವೆಲಿನ್ ಮತ್ತು ಚಕ್ರ ಎಸೆತದಲ್ಲಿ ತೃತೀಯ, ಸಂತೋಷ ಜಾವೆಲಿನ್‌ನಲ್ಲಿ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಹಾಗೂ ಕಬಡ್ಡಿ ದ್ವಿತೀಯ, ಬಾಲಕರ ಖೋಖೋ ದ್ವಿತೀಯ ಸ್ಥಾನ ಪಡೆದಿದೆ.
ಕ್ರೀಡೆಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಮುಖ್ಯೋಪಾಧ್ಯಾಯಿನಿ ಎಲ್ಲಮ್ಮ ಮರಿಸ್ವಾಮಿ, ಶಾಲೆಯ ಶಿಕ್ಷಕ- ಸಿಬ್ಬಂದಿ ವರ್ಗ, ಎಸ್‌ಡಿಎಂಸಿಯವರು ಶುಭ ಕೋರಿದ್ದಾರೆ.