ಜೊಯಿಡಾ: ತಾಲೂಕಿನ ನಂದಿಗದ್ದಾದಲ್ಲಿ ನೂತನ ಪಶು ಆಸ್ಪತ್ರೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಕಷ್ಟು ಆಸ್ಪತ್ರೆಗಳನ್ನು ನೂತನವಾಗಿ ಕಟ್ಟಲಾಗಿದೆ. ಆದರೆ ಇಲ್ಲಿನ ಕೆಲ ಆಸ್ಪತ್ರೆಗಳಿಗೆ ವೈದ್ಯರಿಲ್ಲದೆ ಸಮಸ್ಯೆಯಾಗಿದೆ. ತಾಲೂಕು ಅಷ್ಟೇ ಅಲ್ಲದೇ, ಜಿಲ್ಲೆಯಲ್ಲಿಯೂ ವೈದ್ಯರ ಕೊರತೆ ಇದೆ. ಈ ಹಿಂದೆ ಇದ್ದ ಪಶು ಆಸ್ಪತ್ರೆ ಕಟ್ಟಡ ಹಾಳಾಗಿದ್ದು, ನೂತನ ಆಸ್ಪತ್ರೆಯಿಂದ ಇಲ್ಲಿನ ಜನರಿಗೆ ಅನುಕೂಲವಾಗಲಿದೆ ಎಂದರು.
ಫೋಟೋಲಿ- ಉಳವಿ, ಗುಂದ ರಸ್ತೆ ಹಾಳಾಗಿದ್ದು, ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಈ ಹಿಂದೆ ಗುಂದ, ಯರಮುಖ ಭಾಗಕ್ಕೆ ನಾನು ಬಂದಾಗ ಉತ್ತಮ ಸತ್ಕಾರ ನೀಡಿದ್ದನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾ.ಪಂ. ಉಪಾಧ್ಯಕ್ಷ ಅರುಣ ದೇಸಾಯಿ, ಸದಸ್ಯೆ ದಾಕ್ಷಾಯಿಣಿ ದಾನಶೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಮಾಜಿ ಜಿ.ಪಂ. ಸದಸ್ಯ ರಮೇಶ ನಾಯ್ಕ, ಪಶು ವೈದ್ಯಾಧಿಕಾರಿ ಡಾ.ಪ್ರದೀಪ್, ಆರ್.ಎ.ಭಟ್ಟ ಇತರರು ಇದ್ದರು.