ಯಲ್ಲಾಪುರ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿ ದ ಆರೋಗ್ಯ ಲಸಿಕೆಯ ಮಹತ್ವಸಾರುವ “ಅಕಟಕಟಾ” ನಾಟಕ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.
ಪ್ರೌಢಶಾಲೆಯ ಹಂತದಲ್ಲಿ ವಿಜ್ಞಾನ ವಿಭಾಗದಲ್ಲಿ ಮೂವತ್ತು ನಿಮಿಷದ ಕಾಲಮಿತಿಯಲ್ಲಿ ನಾಟಕವನ್ನು ಪ್ರದರ್ಶಿಸಬೇಕಾಗಿತ್ತು. ಆರೋಗ್ಯ ಕಾಳಜಿಯ ಲಸಿಕೆಯ ಮಹತ್ವ ಸಾರುವ ಈ ನಾಟಕ ಕೃತಿಯನ್ನು ಬರಹಗಾರ ದತ್ತಾತ್ರೇಯ ಭಟ್ಟ ಕಣ್ಣಿಪಾಲ ರಚಿಸಿದ್ದರು. ಸರ್ವೋದಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸರೋಜಾ ಭಟ್ಟ ಸಂಯೋಜಿಸಿ ನಿರ್ದೇಶಿಸಿದ್ದರು.