Slide
Slide
Slide
previous arrow
next arrow

ಅಧ್ಯಕ್ಷ ಸ್ಥಾನದಿಂದ ಅಕ್ರಂ ಖಾನ್ ಉಚ್ಛಾಟನೆಗೆ ನಿರ್ಧಾರ

300x250 AD

ದಾಂಡೇಲಿ: ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ಅವರನ್ನು ಸಮಿತಿಯ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವ ನಿರ್ಣಯವನ್ನು ಹೋರಾಟ ಸಮಿತಿಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ.

ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಪಕ್ಷಾತೀತ ಸಂಘಟನೆಯಾಗಿದ್ದು, ಅಕ್ರಂ ಖಾನ್ ಅವರು ಅಧ್ಯಕ್ಷರಾಗಿದ್ದಾರೆ. ಆದರೆ ಅಕ್ರಂ ಖಾನ್ ಅವರು ಪಕ್ಷಾತೀತ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು, ಈಗ ಜೆಡಿಎಸ್ ಪಕ್ಷದ ದಾಂಡೇಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿಯೂ ಆಯ್ಕೆಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಹೋರಾಟ ಸಮಿತಿಯ ನಿಯಮಕ್ಕೆ ವಿರುದ್ಧವಾಗಿದೆ. ಈ ಕಾರಣದಿಂದ ಅಕ್ರಂ ಖಾನ್ ಅವರು ತಾವೇ ಖುದ್ದಾಗಿ ಹೋರಾಟ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವಪೂರ್ವಕವಾಗಿ ಹೊರ ನಡೆಯಬೇಕು. ಇಲ್ಲದಿದ್ದರೆ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯದಂತೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಿ ನೂತನ ಅಧ್ಯಕ್ಷರನ್ನು ಗಣೇಶ ಚತುರ್ಥಿ ಮುಗಿದ ನಂತರ ಆಯ್ಕೆ ಮಾಡುವ ನಿರ್ಧಾರವನ್ನು ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಹೋರಾಟ ಸಮಿತಿಯ ಉಪಾಧ್ಯಕ್ಷ ರಾಜೇಂದ್ರ ಸೊಲ್ಲಾಪುರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫಿರೋಜ್ ಫೀರ್‌ಜಾದೆ, ಅಶೋಕ ಪಾಟೀಲ, ಬಲವಂತ ಬೊಮ್ಮನಹಳ್ಳಿ, ಗೌರೀಶ ಬಾಬ್ರೇಕರ, ರಾಘವೇಂದ್ರ ಗಡೆಪ್ಪನವರ, ಸತೀಶ ನಾಯ್ಕ, ರವಿ ಸುತಾರ ಮೊದಲಾದವರು ಮಾತನಾಡಿ, ಸಮಿತಿಯನ್ನು ಪಕ್ಷಾತೀತವಾಗಿ ಮತ್ತು ದಕ್ಷತೆಯಿಂದ ಮುನ್ನಡೆಸುವ ಸಮರ್ಥ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡುವ ನಿರ್ಧಾರವನ್ನು ತಿಳಿಸಿದರು.

300x250 AD

ಸಭೆಯಲ್ಲಿ ನಗರಸಭಾ ಸದಸ್ಯ ಮಜೀದ್ ಸನದಿ, ಮುರ್ತುಜಾ ಹುಸೇನ ಆನೆಹೊಸುರ, ಸಂದೀಪ ಡೋಂಬರ, ಫೈರೋಜ್ ಸೇರಿದಂತೆ ಸಮಿತಿಯ ಮೂವತ್ತಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top