Slide
Slide
Slide
previous arrow
next arrow

ಭಾರತದಲ್ಲಿ ಪ್ರತಿ ಕೆಜಿಗೆ $1 ರಂತೆ ಹಸಿರು ಹೈಡ್ರೋಜನ್ ಲಭ್ಯಗೊಳಿಸುವ ಕನಸಿದೆ: ಗಡ್ಕರಿ

300x250 AD

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಭಾರತದಲ್ಲಿ ಪರ್ಯಾಯ  ಇಂಧನಕ್ಕಾಗಿ ಉತ್ತೇಜನವನ್ನು ನೀಡುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹಸಿರು ಇಂಧನಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುವುದು ಅವರ ಪ್ರಮುಖ ಗುರಿಯಾಗಿದೆ.

ಅಲೈಡ್ ಇಂಡಸ್ಟ್ರೀಸ್‌ನ ಸಿವಿಲ್ ಇಂಜಿನಿಯರ್‌ಗಳು ಮತ್ತು ವೃತ್ತಿಪರರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ  ಅವರು,   ಭಾರತದಲ್ಲಿ ಹಸಿರು ಹೈಡ್ರೋಜನ್ ಅನ್ನು ಪ್ರತಿ ಕೆಜಿಗೆ $ 1 ರಂತೆ ಲಭ್ಯವಾಗುವಂತೆ ಮಾಡುವುದು ನನ್ನ ಕನಸು ಎಂದು ಹೇಳಿದ್ದಾರೆ.

ವರದಿಯೊಂದರ ಪ್ರಕಾರ, ಪೆಟ್ರೋಲಿಯಂ, ಬಯೋಮಾಸ್, ಸಾವಯವ ತ್ಯಾಜ್ಯ ಮತ್ತು ಒಳಚರಂಡಿ ನೀರಿನಿಂದ ಹೈಡ್ರೋಜನ್ ಅನ್ನು ಉತ್ಪಾದಿಸಬಹುದು ಮತ್ತು ವಿಮಾನಯಾನ, ರೈಲ್ವೆ ಮತ್ತು ಆಟೋ ಉದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಲಭ್ಯವಾಗುವಂತೆ ಮಾಡಬಹುದು ಎಂದು ಗಡ್ಕರಿ ಹೇಳಿದ್ದಾರೆ.

ಹಸಿರು ಜಲಜನಕವನ್ನು ಕೆಜಿಗೆ 1 ಡಾಲರ್‌ಗೆ ಸಿಗುವಂತೆ ಮಾಡುವುದು ಕನಸು ಎಂದು ಅವರು ಹೇಳಿದ್ದಾರೆ.

300x250 AD

ಗಡ್ಕರಿ ಅವರು ಎಥೆನಾಲ್ ಅನ್ನು ಪರ್ಯಾಯ ಇಂಧನವಾಗಿ ಪ್ರಸ್ತಾಪಿಸಿದ್ದಾರೆ. ಎಥೆನಾಲ್ ಪ್ರತಿ ಲೀಟರ್‌ಗೆ ರೂ 62 ಮತ್ತು ಎಥೆನಾಲ್‌ನ ಕ್ಯಾಲೋರಿ ಮೌಲ್ಯವು ಪೆಟ್ರೋಲ್‌ಗಿಂತ ಕಡಿಮೆಯಿದ್ದರೆ, ಇಂಡಿಯನ್ ಆಯಿಲ್ ರಷ್ಯಾದ ವಿಜ್ಞಾನಿಗಳೊಂದಿಗೆ ಎರಡು ಇಂಧನಗಳಿಗೆ ಸಮಾನವಾದ ಕ್ಯಾಲೋರಿ ಮೌಲ್ಯಗಳನ್ನು ನೀಡಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದೆ ಎಂದು ಅವರು ಬಹಿರಂಗಪಡಿಸಿದರು. ಪೆಟ್ರೋಲಿಯಂ ಸಚಿವಾಲಯವು ಈಗ ತಂತ್ರಜ್ಞಾನವನ್ನು ಪ್ರಮಾಣೀಕರಿಸಿದೆ ಎಂದು ಗಡ್ಕರಿ ಹೇಳಿದ್ದಾರೆ.

2024 ರ ಅಂತ್ಯದ ಮೊದಲು ಭಾರತೀಯ ರಸ್ತೆ ಮೂಲಸೌಕರ್ಯವನ್ನು ಅಮೆರಿಕಾಗೆ ಸಮನಾಗಿ ಮಾಡುವ ತಮ್ಮ ಗುರಿಯನ್ನು ತಲುಪುವಲ್ಲಿ ಭಾರತ ದಾಪುಗಾಲಿಡುತ್ತಿದೆ.  ಹಸಿರು ಪರ್ಯಾಯ ವಸ್ತುಗಳನ್ನು ಬಳಸುವುದು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನದಲ್ಲಿ ದೇಶವು ಪ್ರಚಂಡ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಕೃಪೆ: news13.in

Share This
300x250 AD
300x250 AD
300x250 AD
Back to top