• Slide
    Slide
    Slide
    previous arrow
    next arrow
  • ಗಾಯನ-ವಾದನ, ಚಿಂತನ-ಮಂಥನ, ಸನ್ಮಾನ ಕಾರ್ಯಕ್ರಮ

    300x250 AD

    ಶಿರಸಿ: ಮಾರಿಕಾಂಬಾ ನಗರದ ಗಾಯತ್ರಿ ಗೆಳೆಯರ ಬಳಗದವರ ಆಶ್ರಯದಲ್ಲಿ ಗಾಯನ-ವಾದನ, ಚಿಂತನ ಮಂಥನ ಸನ್ಮಾನ ಕಾರ್ಯಕ್ರಮ ಜರುಗಿತು. ಗಾಯನ ವಾದನ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರೂ ಭಾಗವತರೂ ತಿಮ್ಮಪ್ಪ ಹೆಗಡೆ ಬಾಳೆಹದ್ದ ಇವರು ಯಕ್ಷಗಾನ ಪದ್ಯಗಳನ್ನು ತಮ್ಮ ಅದ್ಭುತವಾದ ಮಧುರವಾದ ಕಂಠಸಿರಿಯಿಂದ ಪ್ರಸ್ತುತಪಡಿಸಿ ನೆರೆದಿರುವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮದ್ದಳೆ ಕಲಾವಿದರಾದ ಶಂಕರ ಭಾಗವತರು ತಮ್ಮ ಪ್ರತಿಭೆಯಿಂದ ಪ್ರೇಕ್ಷಕರನ್ನು ರಂಜಿಸಿದರು.

    ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪರಿಸರ ಹಾಗೂ ಜೀವಶಾಸ್ತ್ರದ ವಿಜ್ಞಾನಿ ಡಾ. ಕೇಶವ ಕೂರ್ಸೆ ಶಿರಸಿ ಇವರು ಸಂಸ್ಕಾರ ವಂಶವಾಹಿನಿಗಳು, ಷೋಡಷೋಪಚಾರ ಮತ್ತು ಜೀವಶಾಸ್ತ್ರದ ಅನೇಕ ರಹಸ್ಯಮಯ ವಿಚಾರಗಳನ್ನು ಹೇಳಿದರು. ತಿಮ್ಮಪ್ಪ ಹೆಗಡೆ ಬಾಳೇಹದ್ದ ಸಮಾಜಸೇವಕ ರವಿಚಂದ್ರ ಗೌಳಿ ರಂಗಕಲಾವಿದ ಗಣಪತಿ ಹೆಗಡೆ ವಡ್ಡಿನಗದ್ದೆ ಛಾಯಾಚಿತ್ರದಲ್ಲಿ ಹೆಸರು ಮಾಡಿದ ಪ್ರಶಸ್ತಿ ವಜೇತರಾದ ನಾಗೇಂದ್ರ ಮುತ್ತುಮೂರ್ಡು ಇವರಿಗೆ ಡಾ.ಕೇಶವ ಕೂರ್ಸೆ ಅಶೋಕ ಹಾಸ್ಯಗಾರ ಪ್ರೋ.ಕೆ. ಎನ್ ಹೊಸಮನೆ ಸಂಸ್ಥಾಪಕ ವಿ.ಜಿ ಗಾಯತ್ರಿ, ಪ್ರೋ ಡಿ. ಎಂ ಭಟ್ಟ ಕುಳವೆ ಶಾಲು ಹೊದಿಸಿ ಸನ್ಮಾನಿಸಿದರು.ಇಂದಿರಾ ಬೈಲಕೇರಿ, ತ್ರಿವೇಣಿ ಹೆಗಡೆ ಸನ್ಮಾನಪತ್ರ ವಾಚಿಸಿದರು.ಸುರೇಶ ಹಕ್ಕಿಮನೆ ಸ್ವಾಗತಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top