ನವದೆಹಲಿ: ವಿದೇಶಿ ನೆಲದಲ್ಲಿ ಹಿಂದೂ ಸಂಸ್ಕೃತಿಯ ಬೇರುಗಳನ್ನು ಪೋಷಿಸುವ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಟೆಕ್ಸಾಸ್‌ನಲ್ಲಿ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಗೀತಾ ಸಹಸ್ರಗಲಾ’ ಕಾರ್ಯಕ್ರಮದಲ್ಲಿ 700 ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು.
ಆಗಸ್ಟ್ 13 ರಂದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಅವಧೂತ ದತ್ತ ಪೀಠಂ ಇದನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಇತಿಹಾಸ ರಚಿಸಿದ್ದಾರೆ. ಅಲೆನ್ ಈವೆಂಟ್ ಸೆಂಟರ್‌ನಲ್ಲಿ ಶ್ರೀ ಗಣಪತಿ ಸಚ್ಚಿಂದಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದನ್ನು ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗಿದೆ. ಸುಮಾರು ಒಂದು ವರ್ಷದಿಂದ ಈ ದಾಖಲೆಗಾಗಿ ಅಭ್ಯಾಸ ನಡೆಸಲಾಗಿತ್ತು.
ಸಾಮೂಹಿಕ ಪಠಣದ ನಂತರ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಪ್ರತಿನಿಧಿಯೊಬ್ಬರು ಸ್ವಾಮೀಜಿಯವರಿಗೆ “ಅತಿದೊಡ್ಡ ಏಕಕಾಲಿಕ ಹಿಂದೂ ಪಠ್ಯ ಪಠಣ” ಕ್ಕಾಗಿ ವಿಶ್ವ ದಾಖಲೆಯನ್ನು ಪ್ರದಾನಿಸಿದರು. ಅಲ್ಲದೆ, ಕಾರ್ಯಕ್ರಮದ ನಂತರ, ಫ್ರಿಸ್ಕೊ ನಗರದ ಮೇಯರ್ ಆಗಸ್ಟ್ 13 ಅನ್ನು “ಗೀತಾ ಸಹಸ್ರಗಳ ದಿನ” ಎಂದು ಘೋಷಿಸಿದರು.
ಸ್ವಾಮೀಜಿಯವರು ಫ್ರಿಸ್ಕೊದಲ್ಲಿರುವ ಕಾರ್ಯ ಸಿದ್ಧಿ ಹನುಮಾನ್ ದೇವಾಲಯದ (KSHT) ಸ್ಥಾಪಕರು ಮತ್ತು ಅವರು “ಗೀತಾ ಮಹಾಯಜ್ಞ” ಕಾರ್ಯಕ್ರಮವನ್ನು ಸ್ಥಾಪಿಸಿದವರು. ಸಂಸ್ಕೃತ ಪಠಣ ಮತ್ತು ಕಂಠಪಾಠವನ್ನು ಕಲಿಸುವುದು ಇದರ ಗುರಿಯಾಗಿದೆ.
ಕೃಪೆ:news13.in