• Slide
    Slide
    Slide
    previous arrow
    next arrow
  • ಗೋಕುಲಾಷ್ಟಮಿಯಂದು ನಂದಗೋಕುಲವಾದ ಲಯನ್ಸ್ ಶಾಲೆ

    300x250 AD

    ಶಿರಸಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ಲಯನ್ಸ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯರಾಗಿ ನಲಿದರು.
    ಲಯನ್ಸ್ ಕ್ಲಬ್ ಶಿರಸಿ ಪ್ರಾಯೋಜತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಒಂದನೇ ತರಗತಿಯ ವಿದ್ಯಾರ್ಥಿಗಳು ಕೃಷ್ಣ ರಾಧೆಯರಾಗಿ ಮಿಂಚಿದರು. ಪುಟ್ಟ ಪುಟ್ಟ ಮಕ್ಕಳು ತಮ್ಮ ನೃತ್ಯದ ಮೂಲಕ ಸಭೆಯನ್ನು ರಂಜಿಸಿದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪ್ರೊಫೆಸರ್ ಎನ್.ವಿ.ಜಿ. ಭಟ್ ರವರು ಶುಭಾಶಯಗಳನ್ನು ಕೋರುತ್ತಾ, ಇಂದು ಲಯನ್ಸ್ ಶಾಲೆಗೆ ಗೋಕುಲವೇ ಇಳಿದಂತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಲ್ಲದೆ ಶಿಕ್ಷಕರು ಮತ್ತು ಪಾಲಕರ ಬಗ್ಗೆ ಶ್ಲಾಘನೀಯ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ತ್ರಿವಿಕ್ರಮ ಪಟವರ್ಧನ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ರಮಾ ಪಟವರ್ಧನ್, ಲಯನ್ಸ ಕ್ಲಬ್ ರೀಜನಲ್ ಚೇರ್ ಪರ್ಸನ್ ಎಂ ಜೆ ಎಫ್ ಲಯನ್ ಜ್ಯೋತಿ ಭಟ್, ಲಯನ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಲಯನ್ ಪ್ರೊಫೆಸರ್ ರವಿ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
    ಲಯನ್ಸ್ ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕರು ಮತ್ತು ಶಿಕ್ಷಕ ಸಿಬ್ಬಂದಿಗಳು, ವಿದ್ಯಾರ್ಥಿಗಳು , ಪಾಲಕರನ್ನೊಳಗೊಂಡ ಕಾರ್ಯಕ್ರಮ ಶ್ರೀಕೃಷ್ಣನ ಪೂಜೆಯೊಂದಿಗೆ ಆರಂಭವಾಗಿ, ಮಕ್ಕಳ ನೃತ್ಯ, ವೇಷಭೂಷಣದೊಂದಿಗೆ ಸುಂದರವಾಗಿ ಮೂಡಿಬಂದಿತು.
    ಸಹ ಶಿಕ್ಷಕಿಯರಾದ ಶ್ರೀಮತಿ ಸುಮನಾ ಹೆಗಡೆ ಮತ್ತು ಕುಮಾರಿ ಯಶಸ್ವಿನಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top