• Slide
  Slide
  Slide
  previous arrow
  next arrow
 • ಭಗವಂತನ ಕೃಪೆ, ತಂದೆ-ತಾಯಿ-ಗುರುಗಳ ಆಶೀರ್ವಾದದಿಂದ ಸಾಧನೆ ಸಾಧ್ಯ: ಮೇವುಂಡಿ

  300x250 AD

  ಯಲ್ಲಾಪುರ: ಭಗವಂತನ ಕೃಪೆ, ತಂದೆ-ತಾಯಿ-ಗುರುಗಳ ಆಶೀರ್ವಾದ ಇದ್ದರೆ ಮಾತ್ರ ಸಾಧನೆ ಮಾಡಲು ಎಂದು ಪ್ರಸಿದ್ಧ ಗಾಯಕ ಜಯತೀರ್ಥ ಮೇವುಂಡಿ ಹೇಳಿದರು.

  ಅವರು ತಾಲೂಕಿನ ತಟಗಾರಿನ ಸ್ವರಮಾಧುರಿ ಸಂಗೀತ ವಿದ್ಯಾಲಯದ ಸಭಾಭವನದಲ್ಲಿ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಗುರು ಪೂಜೆ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬದಲಾದ ಕಾಲಘಟ್ಟದಲ್ಲಿ ಗುರು-ಶಿಷ್ಯ ಪರಂಪರೆಯ ಮೌಲ್ಯ ಕ್ಷೀಣಿಸುತ್ತಿದೆ. ಆದರೆ ಸಂಗೀತ ಕ್ಷೇತ್ರದಲ್ಲಿ ಮಾತ್ರ ಈಗಲೂ ಗುರು-ಶಿಷ್ಯ ಪರಂಪರೆ ಉಳಿದುಕೊಂಡಿದೆ ಎಂದರು.

  ಹುಬ್ಬಳ್ಳಿಯ ವೇ.ಪ್ರಹ್ಲಾದ ಜೋಷಿ,‌ ವಿದುಷಿ ರಮ್ಯಾ, ವಿದ್ಯಾಲಯದ ಶಿಕ್ಷಕಿ ವಿದುಷಿ ವಾಣಿ ಹೆಗಡೆ ಮಾತನಾಡಿದರು. ಪಾರ್ವತಿ.ವಿ.ಹೆಗಡೆ ಉಪಸ್ಥಿತರಿದ್ದರು. ಸ್ವರಮಾಧುರಿ ಸಂಗೀತ ವಿದ್ಯಾಲಯದ ಅಧ್ಯಕ್ಷ ರಮೇಶ ಹೆಗಡೆ, ಶ್ರೀಧರ ಹೆಗಡೆ ನಿರ್ವಹಿಸಿದರು. 

  300x250 AD

      ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜಯತೀರ್ಥ ಮೇವುಂಡಿ ಗಾಯನ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಾದ ಸಾತ್ವಿಕ ಬೆಂಗಳೂರು, ಮಾಧವಿ ಗಾಂವ್ಕರ, ಚೈತನ್ಯಾ ಪರಬ್, ವಿಭಾ ಹೆಗಡೆ, ಲಲಿತ್ ಮೇವುಂಡಿ ಅವರ ಗಾಯನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಗಣೇಶ ಭಾಗ್ವತ್ ಗುಂಡ್ಕಲ್, ರಾಜೇಂದ್ರ ಭಾಗ್ವತ್, ಸಂಜೀವ್ ಕಿತ್ತೂರ್ ತಬಲಾ ಹಾಗೂ ಕಿರಣ ಅಯಾಚಿತ್, ಭರತ್ ಹೆಬ್ಬಲಸು ಹಾರ್ಮೊನಿಯಂ ಸಾಥ್ ನೀಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top