Slide
Slide
Slide
previous arrow
next arrow

ಕೊರ್ಲಕಟ್ಟಾದಲ್ಲಿ ಟಿ.ಎಸ್.ಎಸ್. ಮಿನಿ ಸೂಪರ್ ಮಾರ್ಕೆಟ್ ಆರಂಭ

300x250 AD

ಶಿರಸಿ:ನಗರದ ಪ್ರತಿಷ್ಠಿತ ದಿ ತೋಟಗಾರ್ಸ್ ಕೋ -ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಹಾಗೂ ವ್ಯವಸಾಯ ಸೇವಾಸಹಕಾರಿ ಸಂಘ ನಿ., ಕೊರ್ಲಕಟ್ಟಾಇವರ ಸಹಯೋಗದೊಂದಿಗೆ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‌ನ ಘಟಕವನ್ನು ಕೊರ್ಲಕಟ್ಟಾ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಆ.15 ಬೆಳಿಗ್ಗೆ ದೀಪ ಬೆಳಗಿಸುವುದರ ಮೂಲಕವಾಗಿ ಟಿ.ಎಸ್.ಎಸ್. ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಟಿ.ಎಸ್.ಎಸ್. ನಿರ್ದೇಶಕರುಗಳು, ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ಕೊರ್ಲಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ರಾಮಾ ನಾಯ್ಕ, ಹಾಗೂ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೊರ್ಲಕಟ್ಟಾ ಘಟಕದಲ್ಲಿರುವ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‌ನಲ್ಲಿ ದಿನಸಿಗಳು, ಗೃಹಬಳಕೆ ಉತ್ಪನ್ನಗಳು, ಬಟ್ಟೆಗಳು, ಪಾದರಕ್ಷೆಗಳು, ಸ್ಟೀಲ್ ಸಾಮಗ್ರಿಗಳು, ಪಶು ಆಹಾರಗಳು ಹಾಗೂ ಸಮಗ್ರ ಕೃಷಿ ಅಗತ್ಯತೆಗಳು ಲಭ್ಯವಿರುತ್ತದೆ.ಶುಭಾರಂಭದ ಪ್ರಯುಕ್ತ ಆ.15 ರಿಂದ ಆ.18ರ ವರೆಗೆ ಎಲ್ಲಾ ವಸ್ತುಗಳ ಮೇಲೆ ವಿಶೇಷ ಕೊಡುಗೆಗಳು ಲಭ್ಯವಿರುತ್ತದೆ ಹಾಗೂ ಟಿ.ಎಸ್.ಎಸ್. ಗ್ರೀನ್‌ ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ ಹಾಗೂ ಟಿ.ಎಸ್.ಎಸ್. ಕೃಷಿ ಮಿತ್ರ ಗೊಬ್ಬರಗಳ ಪ್ರತಿ 2 ಚೀಲ ಖರೀದಿ ಮೇಲೆ 1 ಕೂಪನ್ ನೀಡಲಾಗುವುದು. ಈ ಕೂಪನ್‌ಗಳು ದಿನಾಂಕ ಆ.15 ರಿಂದ ಆ.31 ರ ವರೆಗಿನ ಖರೀದಿಗೆ ಅನ್ವಯವಾಗುತ್ತದೆ. ಲಕ್ಕಿಡಿಪ್ ಮೂಲಕ ಅದೃಷ್ಟಶಾಲಿಗಳ ಆಯ್ಕೆಯನ್ನು ಜನವರಿ 2023ರಲ್ಲಿ ನಡೆಸಲಾಗುವುದು.ಸದಸ್ಯರು ಹಾಗೂ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top