ಕಾರವಾರ: ದೇಶಾದ್ಯಂತ ಭಾರತ ಸ್ವಾತಂತ್ರ‍್ಯದ 75ರ ಸಂಭ್ರಮದ ಅಂಗವಾಗಿ ಆ.15ರಂದು ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಹಾಗೂ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಆದ್ದರಿಂದ ಚಿತ್ತಾಕುಲ ಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾನುವಾರದಂದು ನಡೆಯುವ ಸಂತೆಯನ್ನು ಒಂದು ದಿನ ಮುಂಚಿತವಾಗಿ, ಅಂದರೆ ಶನಿವಾರ, ಆ.13ರಂದು ನಡೆಸಲು ತೀರ್ಮಾನಿಸಲಾಗಿದೆ. ಶನಿವಾರ ಮಾತ್ರ ಸಂತೆ ವ್ಯಾಪಾರಕ್ಕಾಗಿ ಅವಕಾಶ ನೀಡಲಾಗಿದೆ. ಯಾವುದೇ ಕಾರಣ ಕ್ಕೂ ಭಾನುವಾರ ಸಂತೆ ನಡೆಸಲು ಅವಕಾಶವಿರುವುದಿಲ್ಲ. ಕಾರಣ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಚಿತ್ತಾಕುಲ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಪಿಡಿಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ತಾಕುಲದಲ್ಲಿ ಸಂತೆ ಶನಿವಾರವೇ ನಡೆಸಲು ಸೂಚನೆ
