• Slide
  Slide
  Slide
  previous arrow
  next arrow
 • ಬೋಧಕರಿಗೆ ವಿಶೇಷ ಮಾನ್ಯತೆಯಿದ್ದರೆ ದೇಶದ ಅಭಿವೃದ್ಧಿ ಸಾಧ್ಯ: ಬಿ.ಎಸ್.ಗೌಡ

  300x250 AD

  ಕುಮಟಾ: ಯಾವ ದೇಶದಲ್ಲಿ ಬೋಧಕರಿಗೆ ವಿಶೇಷವಾದ ಮಾನ್ಯತೆ ಇದೆಯೋ ಆ ದೇಶವು ನಿಸ್ಸಂದೇಹವಾಗಿ ಅಭಿವೃದ್ಧಿಯನ್ನು ಹೊಂದಲು ಸಾಧ್ಯ ಎಂದು ಯಕ್ಷಗಾನ ಕಲಾವಿದ ಹಾಗೂ ಡಯಟ್ ವಿಶ್ರಾಂತ ಉಪನ್ಯಾಸಕ ಬಿ.ಎಸ್.ಗೌಡ ಹೇಳಿದರು.
  ತಾಲೂಕಿನ ಬಗ್ಗೋಣದ ಮಡಿವಾಳ ಕೇರಿಯಲ್ಲಿನ ಅಧ್ಯಾಪಕ ಎಸ್.ಎಸ್.ಪೈರವರ ‘ಮುಕಾಂಬಿಕಾ’ ನಿವಾಸದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಬೋಧಕರ ಸಂಘದ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದರು.
  ಬೋಧಕರು ಸಂಘಟಿತರಾಗಬೇಕು. ಬೋಧಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಆಡಳಿತ ವ್ಯವಸ್ಥೆಯು ಪ್ರಾಶಸ್ತ್ಯವನ್ನು ನೀಡುವಲ್ಲಿ ಬೋಧಕರ ಧ್ವನಿಯಾಗಿ ತೆರೆದುಕೊಂಡು ಕರ್ನಾಟಕ ರಾಜ್ಯ ಬೋಧಕರ ಸಂಘ ದಕ್ಷ ಹಾಗೂ ಪ್ರಾಮಾಣಿಕರನ್ನೊಳಗೊಂಡ ತಂಡವಾಗಿರುವುದರಿಂದ ಇದಕ್ಕೆ ಭವಿಷ್ಯ ಇದೆ ಎಂದ ಅವರು, ಸಂಘದ ಲಾಂಛನವನ್ನು ಚಿತ್ರಕಾರ ಸತೀಶ ಯಲ್ಲಾಪುರರವರು ಪರಿಣಾಮಕಾಯಾಗಿ ಚಿತ್ರಿಸಿ ಉಪಕರಿಸಿರುವುದು ಅಭಿನಂದನೀಯವೆಂದರು.
  ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ ಬರ್ಗಿಯವರು ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿ, ಡಾ.ಆರ್.ಎಂ.ಕುಬೇರಪ್ಪ, ಸೂರಜ ನಾಯ್ಕ ಸೋನಿ ಹಾಗೂ ಪ್ರೊ.ಎಮ್.ಜಿ.ಭಟ್‌ರವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘವು ಸ್ವಾತಂತ್ರ‍್ಯದ ಅಮೃತಮಹೋತ್ಸವದ ಪರ್ವ ಕಾಲದಲ್ಲಿ ತೆರೆದುಕೊಂಡು, ವಿವಿಧ ಸ್ತರದ ಬೋಧಕರ ಹಿತಾಸಕ್ತಿಗಾಗಿ ನಿರಂತರವಾಗಿ ಕಾರ್ಯ ಪ್ರವೃತ್ತವಾಗಲಿದೆ ಎಂದರು.
  ಬಿ.ಎಸ್.ಗೌಡರವರನ್ನು ಸಂಧ್ಯಾ- ಶಿವಾನಂದ ಪೈ ದಂಪತಿ ಫಲ, ತಾಂಬೂಲ, ಶಾಲು ಹಾಗೂ ಸ್ಮರಣಿಕೆಯೊಂದಿಗೆ ಆಪ್ತವಾಗಿ ಗೌರವಿಸಿದರು. ಸಂಘದ ರಾಜ್ಯ ಸಂಚಾಲಕರಾದ ವಿಜಯಕುಮಾರ ನಾಯ್ಕ್, ಕೋಶಾಧ್ಯಕ್ಷ ಶಿವಚಂದ್ರ, ಹಿರಿಯ ಅಧ್ಯಾಪಕ ಬಾಲಚಂದ್ರ ಗಾಂವಕರ, ರಾಜು ನಾಯಕ ಚಿತ್ರಿಗಿ ಹಾಗೂ ಗೋಪಾಲಕೃಷ್ಣ ಪುರಾಣಿಕ ಮೊದಲಾದವರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top