Slide
Slide
Slide
previous arrow
next arrow

ಕೆ.ಎಲ್.ಇ ಸಮೂಹ ಸಂಸ್ಥೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

300x250 AD

ಅಂಕೋಲಾ: ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಪ್ರಭಾಕರ ಕೋರೆಯವರ 75ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೆ.ಎಲ್.ಇ ಸಮೂಹ ಸಂಸ್ಥೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅನಾಥಾಶ್ರಮ ನಿವಾಸಿಗಳಿಗೆ ಹಾಲು ಹಣ್ಣು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸೋಮವಾರ ಕಾಲೇಜಿನ ಮಲ್ಟಿಪರ್ಪಸ್ ಸಭಾಂಗಣದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕೆ.ಎಲ್.ಇ ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಎಲ್.ಭಟ್ಕಳ ಉದ್ಘಾಟಿಸಿದರು. ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದ ಅವರು ಪ್ರಭಾಕರ ಕೋರೆಯವರು ಶಿಕ್ಷಣ ಕ್ಷೇತ್ರದ ಧೀಮಂತ ವ್ಯಕ್ತಿ. ಕೆ.ಎಲ್.ಇ ಸಂಸ್ಥೆಯನ್ನು ಸ್ಥಾಪಿಸಿ 34 ರಿಂದ 280 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಶ್ರೇಷ್ಠ ವ್ಯಕ್ತಿ ಎಂದರು. ಅಲ್ಲದೆ ಅವರ ಜನ್ಮದಿನದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ, ಹಲವಾರು ಕಾರಣಗಳಿಂದ ರಕ್ತದ ಅವಶ್ಯಕತೆಯಿರುತ್ತದೆ. ಹೆಚ್ಚಾಗಿ ಮಹಿಳೆಯರಿಗೆ ಪ್ರಸವದ ಸಮಯದಲ್ಲಿ, ರಕ್ತಹೀನತೆಯ ಸಂದರ್ಭದಲ್ಲಿ ರಕ್ತ ತುಂಬಾ ಅವಶ್ಯವಿರುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಆಗದ ಕಾರಣ ದಾನಿಗಳೇ ರಕ್ತದ ಅವಶ್ಯಕತೆಯನ್ನು ಪೂರೈಸಬೇಕಾಗುತ್ತದೆ. 17 ರಿಂದ 60 ವರ್ಷದೊಳಗಿನ ಅರೋಗ್ಯವಂತರು ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದರು.
ವೇದಿಕೆಯಲ್ಲಿ ಕಾರವಾರದ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ ಸಂದೀಪ ಯಾದವ, ಕೆ.ಎಲ್.ಇ ಸಂಸ್ಥೆಯ ಸದಸ್ಯೆ ಮಿನಲ್ ನಾರ್ವೇಕರ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಗಂಗಾಧರ ಈರಣ್ಣನವರ ಪದವಿ ಕಾಲೇಜಿನ ಪ್ರಾಚಾರ್ಯ ನಾಗಮ್ಮ ಮಮದಾಪುರ, ಡಿ.ಎಡ್ ಕಾಲೇಜಿನ ಪ್ರಾಚಾರ್ಯ ಸರೋಜಿನಿ ಹಾರವಾಡೇಕರ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸ್ಮೀತಾ ಫಾತರಫೇಕರ, ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ನಾಗಮ್ಮ ಆಗೇರ, ಕೌಟುಂಬಿಕ ಸಲಹಾ ಕೇಂದ್ರದ ತಿಮ್ಮಣ್ಣ ಭಟ್ ಉಪಸ್ಥಿತರಿದ್ದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಒಟ್ಟೂ 34 ಜನ ರಕ್ತದಾನ ಮಾಡಿದರು. ಪ್ರಾಚಾರ್ಯ ವಿನಾಯಕ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಪ್ರಿಯಾಂಕ ಬಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಗಂಗಾಧರ ಈರಣ್ಣವರ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top