Slide
Slide
Slide
previous arrow
next arrow

ಕೋಲಸಿರ್ಸಿ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ

300x250 AD

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್, ಕ್ರೀಡೆ ಹಾಗೂ ಸಾಂಸ್ಕೃತಿಕ, ಇಕೋ ಕ್ಲಬ್, ಮತದಾರರ ಸಾಕ್ಷರತಾ ಕ್ಲಬ್ ಚಟುವಟಿಕೆಗಳ ಉದ್ಘಾಟನೆ ನಡೆಯಿತು.
ಸ್ಥಳೀಯ ಕೋಲಶಿರ್ಸಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ವೇತಾ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಸ.ಪ.ಪೂ.ಕಾಲೇಜು ಕೋಲಸಿರ್ಸಿ ಪ್ರಾಚಾರ್ಯರರಾದ ನಂಜುಂಡ ಡಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ದಿನೇಶ್ ಕೆ. ಪ್ರಾಚಾರ್ಯರು ಸ. ಪ. ಪೂ. ಕಾಲೇಜು ಹಲಗೇರಿ ಇವರು ವಿಶೇಷ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಕೋಲಶಿರ್ಸಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಕೆ.ಆರ್.ವಿನಾಯಕ ,ಕಾ.ಅ.ಸಮಿತಿ ಉಪಾಧ್ಯಕ್ಷರಾದ ಮಾದೇವ ನಾಯ್ಕ ದೊಡ್ಮನೆ ಹಾಗೂ ಕಾ.ಅ.ಸಮಿತಿಯ ಸದಸ್ಯರುಗಳು, ಗ್ರಾಂ.ಪಂ. ಸದಸ್ಯರುಗಳು, ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.
ಮಧುರಾ ಎಸ್ ಗೌಡ ಸಂಗಡಿಗರು ಪ್ರಾರ್ಥಿಸಿದರು. ಕಾರ್ತಿಕ್ ಎನ್. ನಾಯ್ಕ ಸ್ವಾಗತಿಸಿದರು. ಭಾರತಿ ವಿ.ನಾಯ್ಕ ವಂದಿಸಿದರು. ಪ್ರದೀಪ್ ಪಿ.ಗೌಡರ್ ಮತ್ತು ಪವಿತ್ರಾ ಎನ್.ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top