Slide
Slide
Slide
previous arrow
next arrow

ಉದಯಕಾಲ ದಿನಪತ್ರಿಕೆ ನೂತನ  ಜಿಲ್ಲಾ ಕಾರ್ಯಾಲಯ ಉದ್ಘಾಟನೆ

300x250 AD

ಶಿರಸಿ : ಪ್ರತಿಷ್ಠಿತ  ಉದಯಕಾಲ ದಿನಪತ್ರಿಕೆಯ ನೂತನ  ಜಿಲ್ಲಾ ಕಾರ್ಯಾಲಯವನ್ನು ಶಿರಸಿ ನಗರದ ಅಶ್ವಿನಿ ಸರ್ಕಲ್ ಬಳಿ ಆರಂಭಿಸಲಾಗಿದ್ದು, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್  ಉದ್ಘಾಟಿಸಿದರು.

ಶ್ರಾವಣ ಶುಕ್ರವಾರದ ಶುಭ ಸಂದರ್ಭದಲ್ಲಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಹೆಬ್ಬಾರ್,  ಉದಯಕಾಲ ದಿನ ಪತ್ರಿಕೆ ಬಹಳ ಹಳೇಯ ಪತ್ರಿಕೆಯಾಗಿದ್ದು  ವಸ್ತುನಿಷ್ಠ ಸುದ್ದಿಗಳನ್ನು ಹೊತ್ತು ತರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪತ್ರಿಕೆ ಬೆಳೆಯಲಿ ಎಂದು ಹಾರೈಸಿದರು. 

ಪತ್ರಿಕೋದ್ಯಮದಲ್ಲಿ ನಿಷ್ಠೆಯ ಅಗತ್ಯವಿದ್ದು, ಇಂದಿನ ಯುವ ಪೀಳಿಗೆಯ ಪತ್ರಕರ್ತರು ಅದನ್ನು ಆಳವಡಿಸಿಕೊಂಡು ಎಲ್ಲರಿಗೂ ಮಾದರಿಯಾಗಲಿ ಎಂದು ಸಲಹೆ ನೀಡಿದರು. ಇದಕ್ಕೂ ಮೊದಲು ಕಚೇರಿಯಲ್ಲಿ ಗಣಪತಿ ಪೂಜೆ ನಡೆಸಿ ಪತ್ರಿಕೆಯ ಅಭಿವೃದ್ಧಿಗೆ ಬೇಡಿಕೊಳ್ಳಲಾಯಿತು.  

300x250 AD

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ, ಉದಯಕಾಲ ಜಿಲ್ಲಾ ವರದಿಗಾರ ಬಿ.ವಿ.ಹುಲಿಗೇಶ ಹಾಗೂ ಶಿರಸಿಯ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top