• Slide
    Slide
    Slide
    previous arrow
    next arrow
  • ICSE ಪರೀಕ್ಷೆಯಲ್ಲಿ ಸ್ನೇಹಾ ಶಾಸ್ತ್ರಿ ಪ್ರಥಮ ಸ್ಥಾನ

    300x250 AD

    ಶಿರಸಿ : ತಾಲೂಕಿನ ಸುಧಾಪುರ ಕ್ಷೇತ್ರದ ಸ್ವರ್ಣವಲ್ಲೀಯ ದಿ.ರಾಮಚಂದ್ರ ಶಾಸ್ತ್ರಿ ಮೊಮ್ಮಗಳು, ನಾಗೇಂದ್ರ ಶಾಸ್ತ್ರಿ ಮತ್ತು ಶ್ರೀಮತಿ ಪೂರ್ಣಿಮಾ ಶಾಸ್ತ್ರಿ ಇವರ ಮಗಳಾದ ಕುಮಾರಿ ಸ್ನೇಹಾ ಶಾಸ್ತ್ರಿ ಇವಳು ICSE  12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 600 ಅಂಕಕ್ಕೆ 598.5 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ದೇಶಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

    ಈಕೆ ಕಳೆದ 14 ವರ್ಷಗಳಿಂದ ಬೆಂಗಳೂರಿನ ಎಸ್.ಎಫ.ಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರತಿವರ್ಷ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದು ಈಗ ದೇಶಕ್ಕೆ, ರಾಜ್ಯಕ್ಕೆ ಮತ್ತು ‌ಸುಧಾಪುರಕ್ಕೆ ಹೆಮ್ಮೆ ತಂದಿದ್ದಾಳೆ.

    300x250 AD

    ಈ ಕುವರಿಯ ಸಾಧನೆಗೆ ತಂದೆ, ತಾಯಿ,ಬಂಧು-ಮಿತ್ರರು, ಶಿಕ್ಷಕ ವೃಂದ, ಊರ ನಾಗರಿಕರು ಅಭಿನಂದಿಸಿ ಇವಳ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top