ಅಂಕೋಲಾ: ಸಾಮಾಜಿಕ ಕಾರ್ಯಗಳಲ್ಲಿ ಮುಂದಿರುವ ಲಯನ್ಸ್ ಕ್ಲಬ್ ಕರಾವಳಿಯು ಲಯನ್ಸ್ ಡಿಸ್ಟ್ರಿಕ್ಟ್ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿಗೆ ಮಹಾಂತೇಶ ರೇವಡಿ ಹಾಗೂ ಉತ್ತಮ ಸೇವಾ ಪ್ರಶಸ್ತಿಗೆ ಸಂಜಯ ಅರುಂಧೇಕರ ಭಾಜನರಾಗಿದ್ದಾರೆ. ಪ್ರಕೃತಿ ವಿಕೋಪದ ಸಮಯದಲ್ಲಿ ಮಾಡಿದ ಕಾರ್ಯ ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಪ್ರಶಸ್ತಿಗಳು, ಕ್ಲಬಿನ ಒಟ್ಟಾರೆ ಸಾಧನೆಗೆ ಎರಡು ಪ್ರಶಸ್ತಿಗಳು ಹೀಗೆ ಒಟ್ಟು ಐದು ಪ್ರಶಸ್ತಿಗಳನ್ನು ಕ್ಲಬ್ ಗಳಿಸಿಕೊಂಡಿದೆ. ಮಡಗಾಂವದಲ್ಲಿ ಜರುಗಿದ ಯುನಿಸನ್ ರೆಡ್ ಕಾರ್ಪೆಟ ಅವಾರ್ಡ್ ಸಮಾರಂಭದಲ್ಲಿ ಪ್ರಾಂತಪಾಲ ಶ್ರೀಕಾಂತ ಮೋರೆಯವರಿಂದ ಅಧ್ಯಕ್ಷ ಕರುಣಾಕರ ತಂಡದವರು ಈ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಕ್ಲಬ್‌ನ ಸಾಧನೆಯನ್ನು ಪ್ರಾಂತಪಾಲರು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಕ್ಲಬ್‌ನ ಸಾಧನೆಯಲ್ಲಿ ಸಹಕರಿಸಿದ ಕ್ಲಬ್ ಸದಸ್ಯರು, ದಾನಿಗಳು, ಪತ್ರಕರ್ತರು, ಸಾರ್ವಜನಿಕರಿಗೆ ಕಳೆದ ಬಾರಿಯ ಲಯನ್ಸ್ ಅಧ್ಯಕ್ಷ ಡಾ.ಕರುಣಾಕರ ತಂಡ ಕೃತಜ್ಞತೆಯನ್ನು ಸಲ್ಲಿಸಿದೆ.