• Slide
    Slide
    Slide
    previous arrow
    next arrow
  • ಉಕ್ಕಿ ಹರಿದ ವರದೆ;ಹಲವು ಗ್ರಾಮಗಳ ಸಂಪರ್ಕ ಕಡಿತ

    300x250 AD

    ಶಿರಸಿ: ತಾಲೂಕಿನೆಲ್ಲೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಬನವಾಸಿ ಬಳಿಯ ವರದಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಹಲವು ರಸ್ತೆ ಮಾರ್ಗಗಳು ಬಂದ್ ಆಗಿವೆ. ಬನವಾಸಿ- ಶಿರಸಿ ಮಾರ್ಗದಲ್ಲಿ ಗುಡ್ನಾಪುರ ಬಳಿ ವರದ ನದಿಯು ಉಕ್ಕಿ ಹರಿದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬನವಾಸಿ ಜಡೆ ನಡುವೆ ಕನಕಾಪುರದ ಬಳಿ ರಸ್ತೆ ಬಂದ್ ಆಗಿದೆ.ನೀರಿನ ಮಟ್ಟ ಹೆಚ್ಚುತ್ತಿರುವುದರ ಪರಿಣಾಮ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ವರದಾ ನದಿಯ ದಂಡೆಯ ಅಕ್ಕಪಕ್ಕದ ಗ್ರಾಮಗಳಾದ ಮುಗವಳ್ಳಿ,ಭಾಶಿ,ಅಜ್ಜರಣಿ ಗ್ರಾಮದ ಗದ್ದೆಗಳು ಸಂಪೂರ್ಣ ಮುಳುಗಡೆಯಾಗಿವೆ. ರಸ್ತೆ ಸಂಚಾರ ಸುಗಮವಾಗಿಸಲು ಪ್ರಯತ್ನಿಸುತ್ತಿದ್ದು, ಬನವಾಸಿ ಪಿ.ಎಸ್.ಐ. ಹನುಮಂತ್ ಬಿರಾದಾರ್ ಹಾಗು ಇತರ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top