ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಲ್ಲೇಶ್ವರದ ನಿವಾಸಿ ಸುನೀತಾ ಸಿದ್ದಿ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಏಕಕಾಲಕ್ಕೆ ಜನ್ಮ ನೀಡಿದ್ದಾರೆ.
ಉಡುಪಿಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಗರ್ಭಿಣಿ ಸುನೀತಾ, ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕ್ಲಿಷ್ಟಕರವಾಗಿದ್ದ ಶಸ್ತಚಿಕಿತ್ಸೆ ನಡೆಸಿ ಮೂರು ಮುದ್ದು ಕಂದಮ್ಮಗಳನ್ನು ಆಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ.
ವೈದ್ಯರುಗಳಾದ ಕವಿಶಾ ಭಟ್, ರಜನಿ ಕಾರಂತ್, ಸೂರ್ಯ ನಾರಾಯಣ, ಗಣಪತಿ ಹೆಗಡೆ ಹಾಗೂ ಮಹಾದೇವ ಭಟ್ ತಜ್ಞ ವೈದ್ಯರುಗಳನ್ನು ಒಳಗೊಂಡ ತಂಡ ಯಶಸ್ವಿಯಾಗಿ ಸಿಸೇರಿಯನ್ ಮೂಲಕ ಮಹಿಳೆಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.