Slide
Slide
Slide
previous arrow
next arrow

ಪ್ರಾಮಾಣಿಕತೆ ಮೆರೆದ ರೋಟರಿ ಶಾಲೆಯ ವಿದ್ಯಾರ್ಥಿನಿಯರು

300x250 AD

ದಾಂಡೇಲಿ : ರಸ್ತೆಯಲ್ಲಿ ಹಣ ಸಿಕ್ಕಿದರೇ ಆ ಹಣವನ್ನು ಹೆಕ್ಕಿ ಸಂಭ್ರಮಿಸುವ ಕಾಲಘಟ್ಟದಲ್ಲಿಯೂ ರಸ್ತೆಯಲ್ಲಿ ಸಿಕ್ಕ ಹಣ ನಮ್ಮದಲ್ಲ, ಅದನ್ನು ಸಂಬಂಧಪಟ್ಟ ವಾರಿಸುದಾರರಿಗೆ ತಲುಪಿಸಬೇಕು ಎಂಬ ಆಶಯದಡಿ ನಗರದ ರೋಟರಿ ಶಾಲೆಯ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಸಿಕ್ಕ 300ರೂ. ಹಣವನ್ನು ನೇರವಾಗಿ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ  ಶುಕ್ರವಾರ ನಡೆದಿದೆ.

ಇನ್ನೂ ಗ್ರಾಮೀಣ ಠಾಣೆಯ ಪೊಲೀಸರು ವಿದ್ಯಾರ್ಥಿನಿಯರ ಪ್ರಾಮಾಣಿಕತೆಯನ್ನು ಶ್ಲಾಘಿಸಿ, ಆ 300 ರೂ ಹಣವನ್ನು ಶೈಕ್ಷಣಿಕ ಚಟುವಟಿಕೆಗೆ ಉಪಯೋಗಿಸುವಂತೆ ವಿದ್ಯಾರ್ಥಿಯರಿಗೆ ನೀಡಿದ್ದಾರೆ. ವಿದ್ಯಾರ್ಥಿನಿಯರ ಈ ಸುಸಂಸ್ಕೃತ ನಡುವಳಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

300x250 AD
Share This
300x250 AD
300x250 AD
300x250 AD
Back to top