ಕಳೆದ 5 ವರ್ಷದಲ್ಲಿ ಬ್ಯಾಂಕಿನ ಪ್ರಗತಿಯಲ್ಲಿ ಅಭಿವೃದ್ಧಿಯ ನಾಗಾಲೋಟ
ವಿರೋಧಿಗಳ ಹುಸಿ ಆರೋಪಕ್ಕೆ ಕಿವಿಕೊಡದ ಗ್ರಾಹಕ ಸಮುದಾಯ
e – ಉತ್ತರ ಕನ್ನಡ ವರದಿ :
1920 ರಲ್ಲಿ ಸ್ಥಾಪಿತವಾದ ಕೆನರಾ ಡಿ. ಸಿ. ಸಿ. ಬ್ಯಾಂಕ್ ಲಿಮಿಟೆಡ್, ಶಿರಸಿ ಇದು ಭಾರತೀಯ ರಿಝರ್ವ ಬ್ಯಾಂಕಿನಿಂದ ಲೈಸೆನ್ಸ್ ಪಡೆದ ಪ್ರಪ್ರಥಮ ಜಿಲ್ಲಾ ಕೇಂದ್ರ ಬ್ಯಾಂಕಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಆರ್ಥಿಕ ಪ್ರಗತಿಗಾಗಿ ತನ್ನ 104 ವರ್ಷಗಳ ಸೇವೆ ಸಲ್ಲಿಸಿ, 105 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಬ್ಯಾಂಕಿನ ಸರ್ವ ವಿಧದ ಉತ್ತಮ ಸಾಧನೆ ಬಗ್ಗೆ ನಬಾರ್ಡ್, ಕರ್ನಾಟಕ ರಾಜ್ಯದಲ್ಲಿಯೇ ಉತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕೆಂದು ಸತತವಾಗಿ ಎರಡು ವರ್ಷ ತಲಾ ರೂ. 5.00 ಲಕ್ಷ ಹಾಗೂ 2000-01 ನೇ ಸಾಲಿನಲ್ಲಿ ರೂ. 1.50 ಲಕ್ಷ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಪುರಸ್ಕರಿಸಿದೆ.
ಇದೇ ಪ್ರಕಾರ ರಾಜ್ಯ ಮಟ್ಟದಲ್ಲಿ ಉತ್ತಮ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕೆಂದು ಅಪೆಕ್ಸ್ ಬ್ಯಾಂಕಿಂದ 35 ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. 2015-16,2017-18 ಹಾಗು 2021/22 ನೇ ಸಾಲಿನ ಬಗ್ಗೆಯೂ ಕೆಡಿಸಿಸಿ ಬ್ಯಾಂಕು ರಾಜ್ಯ ಮಟ್ಟದಲ್ಲಿ “ಎ” ವರ್ಗದಲ್ಲಿ ಉತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕೆಂದು ಅಪೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿ ಪತ್ರ, ನಗದು ಬಹುಮಾನ ಹಾಗೂ ಪಾರಿತೋಷಕ ಪಡೆದಿದೆ.
2020-21 ರ ಸಾಲಿನಲ್ಲಿ ಬ್ಯಾಂಕಿನ ಶೇರು ಬಂಡವಾಳ ರೂ.79.18 ಕೋಟಿ, 21-22ರಲ್ಲಿ 94.48 ಕೋಟಿ ರೂ, 22-23ರ ಸಾಲಿನಲ್ಲಿ 110.39 ಕೋಟಿ ರೂ, 23-24 ರ ವರ್ಷದಲ್ಲಿ 131.28 ಕೋಟಿ ರೂ, 2024-25 145.11 (Unaudited) ಕೋಟಿಗಳಷ್ಟರ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ಏರತೊಡಗಿದೆ.
ಅದೇ ರೀತಿ ಬ್ಯಾಂಕಿನ ಒಟ್ಟೂ ನಿಧಿಗಳನ್ನು ಪರಿಗಣನೆ ತೆಗೆದುಕೊಂಡರೆ, 2020-21 ರ ಸಾಲಿನಲ್ಲಿ 159.46 ಕೋಟಿ ರೂ., 21-22 ರ ಸಾಲಿನಲ್ಲಿ 187.65 ಕೋಟಿ ರೂ., 22-23 ರ ಸಾಲಿನಲ್ಲಿ 242.31 ಕೋಟಿ ರೂ., 23-24 ರ ಸಾಲಿನಲ್ಲಿ 321.94 ಕೋಟಿ ರೂಪಾಯಿ ಹಾಗು 2024-25ರ ಆರ್ಥಿಕ ವರ್ಷದಲ್ಲಿ 351.44 (Unaudited) ರಷ್ಟು ಗರಿಷ್ಟ ಏರಿಕೆ ಕಸಣುವುದರ ಮೂಲಕ ಬ್ಯಾಂಕಿ ನಿಧಿಗಳ ಸಂಗ್ರಹದಲ್ಲಿಯೂ ತನ್ನ ಧಾಪುಗಲನ್ನು ಗಟ್ಟಿಯಾಗಿ ಊರುವುದರ ಮೂಲಕ ಜನರ ವಿಶ್ವಾಸನೀಯ ಆರ್ಥಿಕ ಕೇಂದ್ರವಾಗಿ ರೂಪುಗೊಂಡಿದೆ.
ಕಳೆದ ಐದು ವರ್ಷಗಳ ಕೆಡಿಸಿಸಿ ಬ್ಯಾಂಕಿನ ಠೇವುಗಳಲ್ಲಾದ ಏರುಗತಿಯನ್ನು ಗಮನಿಸಿದರೆ ಬ್ಯಾಂಕಿನ ಗ್ರಾಹಕರು ಬ್ಯಾಂಕಿನಲ್ಲಿ ಠೇವು ಇಡುವುದರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. 2020-21 ರ ಸಾಲಿನಲ್ಲಿ 2536.46 ಕೋಟಿ ರೂಪಾಯಿ., 21-22 ರ ಸಾಲಿನಲ್ಲಿ 2957.45 ಕೋಟಿ ರೂ., 2022-23ರಲ್ಲಿ 3057.08 ಕೋಟಿ ರೂ., 2023-24 ರಲ್ಲಿ 3330.41 ಕೋಟಿ ರೂಪಾಯಿ ಹಾಗು 2024-25 ರ ಸಾಲಿನಲ್ಲಿ 3569.45 ಕೋಟಿ ರೂಪಾಯಿ (Unaudited) ಗಳಷ್ಟನ್ನು ದಾಖಲಿಸುವುದರ ಮೂಲಕ ಕಳೆದ ಐದು ವರ್ಷಗಳಿಂದಲೂ ಗ್ರಾಹಕರ ವಿಶ್ವಾಸಗಳಿಸುತ್ತಾ, ಅಭಿವೃದ್ಧಿಯ ಹಾದಿಯನ್ನು ಹಿಡಿದಿರುವುದು ತನ್ನ ದಾಖಲೆಗಳ ಮೂಲಕ, ಅಂಕೆ ಸಂಖ್ಯೆಗಳ ಮೂಲಕವೇ ತಿಳಿಯುತ್ತದೆ.
ಮುಂದುವರೆಯುವುದು…