ಸಿದ್ದಾಪುರ: ಕರ್ನಾಟಕ ಬ್ಯಾಂಕ್ ಸಿದ್ದಾಪುರ ಇದರ ಶಾಖಾ ವ್ಯವಸ್ಥಾಪಕ ಗೌರೀಶ ಹೆಗಡೆ ಅವರನ್ನು ಸಿದ್ದಾಪುರ ಟಿಎಮ್ಎಸ್ನಿಂದ ಬೀಳ್ಕೊಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಟಿಎಮ್ಎಸ್ ಅಧ್ಯಕ್ಷ ಆರ್.ಎಮ್. ಹೆಗಡೆ ಬಾಳೇಸರ ಮಾತನಾಡಿ, ಸ್ನೇಹ ಸೌಜನ್ಯದಿಂದ ಬ್ಯಾಂಕ್ ಅನ್ನು ಬೆಳೆಸಿ ಉತ್ತಮವಾಗಿ ಗ್ರಾಹಕರೊಂದಿಗೆ ವ್ಯಾವಹಾರಿಕ ಸಂಬಂಧವನ್ನು ಕಾಯ್ದುಕೊಂಡು ಬಂದ ಗೌರೀಶ್ ಹೆಗಡೆ ಅವರನ್ನು ಅಭಿನಂದಿಸಿದರು.
ನಿರ್ಗಮಿತ ಕರ್ನಾಟಕ ಬ್ಯಾಂಕ್ ಶಾಖಾವ್ಯವಸ್ಥಾಪಕ ಗೌರೀಶ್ ಹೆಗಡೆ ಮಾತನಾಡಿ , ಸಿದ್ದಾಪುರದಲ್ಲಿನ ಗ್ರಾಹಕರು ಉತ್ತಮ ಸಂಬಂಧ ಕಾಯ್ದುಕೊಂಡು ಬಂದಿದ್ದಾರೆ. ಬ್ಯಾಂಕ್ ಅನ್ನು ಪ್ರಗತಿಪರವಾಗಿ ನಡೆಸಿಕೊಂಡು ಬಂದರು.
ನೂತನ ಶಾಖಾ ವ್ಯವಸ್ಥಾಪಕ ಶಂಭುಲಿಂಗ ಭಟ್ಟ ಅವರನ್ನು ಸ್ವಾಗತಿಸಲಾಯಿತು. ಟಿ.ಎಮ್ ಎಸ್ ನಿರ್ದೇಶಕ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ,ಎಮ್ ಎನ್ ಹೆಗಡೆ ತಲೆಕೆರೆ, ವ್ಯವಸ್ಥಾಪಕ ಸತೀಶ ಎಸ್ ಹೆಗಡೆ ಹೆಗ್ಗಾರಕೈ, ಪ್ರಶಾಂತ ಪಾಟೀಲ್ ಸಾಗರ, ಹಾಗೂ ಬ್ಯಾಂಕ್ ಸಿಬ್ಬಂದಿ ಮಂಜುನಾಥ ಉಪಸ್ಥಿತರಿದ್ದರು.