ಶಿರಸಿ: ಇಲ್ಲಿಯ ಯಕ್ಷಕಲಾ ಸಂಗಮ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕಲಿಕಾ ಕೇಂದ್ರದ ವಾರ್ಷಿಕೋತ್ಸವ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಇಂದು ಏ.10ರ ಸಂಜೆ 3.30ಕ್ಕೆ ಆಯೋಜನೆಗೊಂಡಿದೆ.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿ ಬಾಗೀರಥಿ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಯಕ್ಷ ಕಲಿಕೆ ಕೈಪಿಡಿ ಬಿಡುಗಡೆಗೊಳಿಸಲಿದ್ದಾರೆ. ಇದೇ ವೇಳೆ ಕಲಾ ಪೋಷಕ, ಅರ್ಥಧಾರಿ ಸುಬ್ರಾಯ ಹೆಗಡೆ ಕೆರೆಕೊಪ್ಪ ದಂಪತಿಯನ್ನು ಸನ್ಮಾನಿಸಲಾಗುತ್ತಿದೆ. ಬಳಿಕ ಯಕ್ಷಕಲಾ ಸಂಗಮದ ವಿದ್ಯಾರ್ಥಿಗಳಿಂದ ಧನುರ್ವಿದ್ಯಾಭ್ಯಾಸ ಹಾಗೂ ಉಷಾ ಸ್ವಯಂವರ ಯಕ್ಷಗಾನಗಳ ಪ್ರದರ್ಶನ ನಡೆಯಲಿದೆ ಎಂದು ಯಕ್ಷಕಲಾ ಸಂಗಮದ ಅಧ್ಯಕ್ಷೆ ಸುಮಾ ಗಡಿಗೆಹೊಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.