ಶಿರಸಿ: ಇಲ್ಲಿನ ಪ್ರತಿಷ್ಠಿತ ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶವು ಶೇಕಡಾ 99.38% ರಷ್ಟಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ್ಯಾಂಕ್ನಲ್ಲಿ, 5 ರ್ಯಾಂಕ್ ಪಡೆದು ಸಾಧನೆ ಗೈದಿದ್ದಾರೆ. ಪರೀಕ್ಷೆಗೆ ಕುಳಿತ 321 ವಿದ್ಯಾರ್ಥಿಗಳಲ್ಲಿ 319 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸುಕನ್ಯಾ ಎ. ಗೌಡ 590/600 ಕಾಲೇಜಿಗೆ ಪ್ರಥಮ, ರಾಜ್ಯಕ್ಕೆ 10 ನೇ ರ್ಯಾಂಕ್, ಸುಶಾಂತ ಆರ್. ರೇವಣಕರ್ 589/600 ದ್ವಿತೀಯ, ಮಾನಸಾ ಯು. ಶಾನಭಾಗ್ 587/600 ತೃತೀಯ, ವಾಣಿಜ್ಯ ವಿಭಾಗದಲ್ಲಿ ರುಚಿತಾ ಶಂಕರ ಹೆಗಡೆ 591/600 ಪ್ರಥಮ, ರಾಜ್ಯಕ್ಕೆ 9 ನೇ ರ್ಯಾಂಕ್, ಶ್ರೀಜಾ ನಾಗೇಂದ್ರ ಭಟ್ಟ 589/600 ದ್ವಿತೀಯ, ರವೀನಾ ಪಿ. ಪನ್ವಾರ 586/600 ತೃತೀಯ, ಕಲಾ ವಿಭಾಗದಲ್ಲಿ ದೀಪಕ ಜೆ. ಹೆಗಡೆ 573/600 ಪ್ರಥಮ, ಅನಿತಾ ಪಿ. ಹನುಮಾಪುರ 559/600 ದ್ವಿತೀಯ ರೇಷ್ಮಾ ಟಿ. ನಾಯ್ಕ 536/600 ತೃತೀಯ ಸ್ಥಾಮ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಅಧ್ಯಕ್ಷರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಹಾವಿದ್ಯಾಲಯದ ಪ್ರಾರ್ಚಾಯರು ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ವರ್ಗದವರು ಇನ್ನು ಹೆಚ್ಚಿನ ಸಾಧನೆಮಾಡಲೆಂದು ಶುಭ ಹಾರೈಸಿದ್ದಾರೆ.