ಶಿರಸಿ: ಅಂಬಾಗಿರಿಯ ಕಾಳಿಕಾಭವಾನಿ ದೇವಳದಲ್ಲಿ ವಾರ್ಷಿಕವಾಗಿ ವಸಂತ ನವರಾತ್ರಿಯಲ್ಲಿ ನಡೆಯುವ ನವಚಂಡಿಹವನ ಸಾಂಗವಾಗಿ ನೆರವೇರಿತು.
ಶ್ರೀಮತಿ ಸುಮಿತ್ರಾ ಮಾರ್ಕಾಂಡೆ ಇವರ ಕುಟುಂಬದವರಾದ ಶ್ರೀಮತಿ ಮಹಾದೇವಿ ಹಾಗೂ ನಾಗೇಂದ್ರ ಮಾರ್ಕಾಂಡೆ ದಂಪತಿ ಯಜಮಾನತ್ವದಲ್ಲಿ ನಡೆಯಿತು. ವಿಘ್ನೇಶ್ವರ ಭಟ್ಟರು ಋತ್ವಿಜರೊಡಗೂಡಿ ಹವನ ಕಾರ್ಯಕ್ರಮವನ್ನು ನೆರವೇರಿಸಿದರು.ಬೆಳಿಗ್ಗೆ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಿತು. ನವಚಂಡಿಹವನದ ಪೂರ್ಣಾಹುತಿಯ ನಂತರ ಶ್ರೀದೇವಿಯ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಣೆಯು ನಡೆಯಿತು.