Slide
Slide
Slide
previous arrow
next arrow

ಚಂದಗುಳಿ ಗಂಟೆ ಗಣಪತಿ ಸನ್ನಿಧಾನದಲ್ಲಿ ಅನ್ನಪ್ರಸಾದ ವ್ಯವಸ್ಥೆ ಪ್ರಾರಂಭ

300x250 AD

ಯಲ್ಲಾಪುರ : ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಯಲ್ಲಾಪುರದ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ನೂತನ ಪ್ರತಿಷ್ಠಾ ಮಹೋತ್ಸವದ ನಂತರ ಅನೇಕ ಭಕ್ತರ ಬೇಡಿಕೆ ಮತ್ತು ಆಡಳಿತ ಮಂಡಳಿಯ ನಿರ್ಣಯದಂತೆ ಮಂಗಳವಾರದಿಂದ ಮಧ್ಯಾಹ್ನದ ಅನ್ನಪ್ರಸಾದ ಭೋಜನ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.

ಇಂದಿನಿಂದ ಒಂದು ತಿಂಗಳ ಕಾಲ ಪಾರ್ವತಿ ಮತ್ತು ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸಹೋದರರು ಮತ್ತು ಕುಟುಂಬದವರು ಸೇರಿ ಮಧ್ಯಾಹ್ನ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆಯನ್ನು ಸೇವಾ ರೂಪದಲ್ಲಿ ಮಾಡುವುದಾಗಿ ಘೋಷಿಸಿದಂತೆ ಅದಕ್ಕೆ ಚಾಲನೆ ನೀಡಿ, ಶ್ರೀ ಸಿದ್ಧಿವಿನಾಯಕನಲ್ಲಿ ಪ್ರಾರ್ಥಿಸಿ, ‘ನಿನ್ನ ಅನುಗ್ರಹದಿಂದ ನಿರಂತರ ಅನ್ನಪ್ರಸಾದ ವ್ಯವಸ್ಥೆ ನಡೆಯುವಂತೆ ಭಕ್ತರಿಗೆ ಶಕ್ತಿಯನ್ನು ದಯಪಾಲಿಸಬೇಕು. ಯಾವುದೇ ಅಡೆತಡೆ ಆಗದಂತೆ ನಿರಂತರ ನಡೆಯುವಂತೆ ಮಹಾಗಣಪತಿ ಅನುಗ್ರಹಿಸಬೇಕೆಂದು’ ಪ್ರಸಾದ ಬೋಜನ ವಿತರಣೆಯ ಮುನ್ನ ದೇವರಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥಿಸಿ, ಬಂದ ಭಕ್ತರಿಗೆ ಸ್ವತಃ ಹಂಡ್ರಮನೆ ಕುಟುಂಬದವರು ಅನ್ನಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ವಿ.ಲಕ್ಷ್ಮಿನಾರಾಯಣ ಭಟ್ಟ ತಾರೀಮಕ್ಕಿ, ಆಡಳಿತ ಮಂಡಳಿಯ ಸದಸ್ಯರಾದ ಎಲ್.ಪಿ.ಭಟ್ಟ ಗುಂಡ್ಕಲ್, ನರಸಿಂಹ ಭಟ್ಟ ಗುಂಡ್ಕಲ್, ದೇವಸ್ಥಾನದ ಕಾರ್ಯದರ್ಶಿ ಹಾಗೂ ಊಟೋಪಚಾರ ವ್ಯವಸ್ಥೆಯ ಹೊಣೆ ಹೊತ್ತ ಶಿವರಾಮ ಭಟ್ಟ ಅಲ್ಲದೇ, ನರಸಿಂಹ ಭಟ್ಟ ಹಂಡ್ರಮನೆ, ವಿ.ಕೆ.ಭಟ್ಟ ಶೀಗೇಪಾಲ, ವೆಂಕಟರಮಣ ಭಟ್ಟ ಸೇರಿದಂತೆ ಅನೇಕ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಪ್ರಥಮ ದಿನವೇ ನೂರಾರು ಭಕ್ತರು ಪ್ರಸಾದ ಸ್ವೀಕರಿಸಿ, ತಮ್ಮ ಸಂತಸವನ್ನು ಹಂಚಿಕೊಂಡರು.
ಪ್ರತಿದಿನವೂ 12 ಗಂಟೆಯೊಳಗೆ ಪ್ರಸಾದ ಭೋಜನ ಮಾಡುವವರು ದೇವಸ್ಥಾನದ ಕಾರ್ಯಾಲಯದಲ್ಲಿ ಟೋಕನ್ ಪಡೆದು, ಸಹಕರಿಸಬೇಕೆಂದು ಸಮಿತಿಯವರು ಭಕ್ತರಲ್ಲಿ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top