Slide
Slide
Slide
previous arrow
next arrow

ಪಾರಂಪರಿಕ ದಿನಾಚರಣೆ: ಹಳೆಯ ಕಾಲದ ವಿಶೇಷ ವಸ್ತುಗಳ ಪ್ರದರ್ಶನ

300x250 AD

ಸಿದ್ದಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾ: 25ರಂದು ಸಾಂಸ್ಕೃತಿಕ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗೆ “ಜನಪದ ಉತ್ಸವ”ದ ಅಂಗವಾಗಿ ‘ಪಾರಂಪರಿಕ ದಿನ’ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವಿಶೇಷತೆಗೆ ಅನುಗುಣವಾಗಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ಪುರಾತನ ವಸ್ತುಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಹಳೆಯಕಾಲದಲ್ಲಿ ಬಳಸುತ್ತಿದ್ದಂತಹ ಮಣ್ಣಿನ ಅಡುಗೆ ಸಾಮಗ್ರಿಗಳು, ದಿನನಿತ್ಯ ಬಳಸುತ್ತಿದ್ದಂತಹ ವಸ್ತುಗಳಾದ ಮರದ ಮತ್ತು ಬಿದಿರಿನ ಸೇರು, ಸಿದ್ದಿ, ಪಾವು, ಕೊಳಗ, ಕಂಚು ಮತ್ತು ತಾಮ್ರದ ವಸ್ತುಗಳು, ದಾಸ್ತಾನು ಪರಿಕರಗಳು, ಬೆಳಕಿಗಾಗಿ ಬಳಸುತ್ತಿದಂತಹ ಮಣ್ಣಿನ, ಕಂಚಿನ ಮತ್ತು ತಾಮ್ರದ ದೀಪಗಳು, ಹಣತೆಗಳು, ಲಾಟೀನುಗಳನ್ನು, ಹಳೆಯಕಾಲದಲ್ಲಿ ಬಳಕೆಯಲ್ಲಿದಂತಹ ದೇಶಿ ಮತ್ತು ವಿದೇಶಿ ನಾಣ್ಯಗಳು, ನೋಟುಗಳು, ಮದುವೆ ಹಾಗೂ ಹಬ್ಬ ಹರಿದಿನಗಳಲ್ಲಿ ಬಳಸುತ್ತಿದ್ದಂತಹ ವಿಶೇಷ ವಸ್ತುಗಳಾದ ಮರದ ಗೊಂಬೆಗಳು, ಹಸೆ ಚಿತ್ತಾರ, ತಾಂಬೂಲದ ಬಟ್ಟಲು, ಆರತಿ ತಟ್ಟೆ, ಮನೆಯ ಅಲಂಕಾರಿಕ ಸಾಮಗ್ರಿಗಳು, ಭಜನೆಗಳಲ್ಲಿ ಬಳಸುತ್ತಿದ್ದಂತಹ ತಾಳ, ಕಂಸಾಳೆ, ಮದ್ದಳೆ ಹಾಗೂ ಕೃಷಿ ಪರಿಕರಗಳಾದ ಮರದ ಕತ್ತಿಗಳು, ವಡ್ಯಾಣ, ಭಿತ್ತನೆಯಲ್ಲಿ ಬಳಸುವ ಭತ್ತದ ಬುಟ್ಟಿಗಳು, ಕೊಟ್ಟಿಗೆಯಲ್ಲಿ ದನಕರುಗಳಿಗೆ ಬಳಸುವ ವಿವಿಧ ರೀತಿಯ ಗೆಜ್ಜೆ ವಸ್ತುಗಳು, ಮೀನುಗಾರಿಕೆ ವಸ್ತುಗಳಾದ ಕುಣಿ, ಮಂಕರಿ ಹಾಗೂ ವಿವಿಧ ರೀತಿಯ ಕೆಲಸಗಳಲ್ಲಿ ಬಳಸುವ ವಿಶೇಷ ವಸ್ತುಗಳು ಹೀಗೆ ಹಲವು ಬಗೆಯ ವಸ್ತುಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ ಎನ್ ನಾಯ್ಕ ಅಧ್ಯಕ್ಷತೆಯನ್ನುವಹಿಸಿ ಉದ್ಘಾಟಿಸಿ ಮಕ್ಕಳಿಗೆ ನಮ್ಮ ನಾಡು ನುಡಿ ಬಗ್ಗೆ ತಿಳಿಸಿದರು. ಆಗಿನ ಜನರು ಎಷ್ಟು ಅಚ್ಚು ಕಟ್ಟಾಗಿ ತಮಗೆ ಅವಶ್ಯವಿರುವ ವಸ್ತುಗಳನ್ನು ತಾವೇ ತಯಾರಿಸಿ ಬಳಸುತ್ತಿದ್ದರು. ಅವುಗಳನ್ನು ನಾವು ಜೋಪನವಾಗಿ ಕಾಪಾಡಿ ಕೊಂಡು ಮುಂದಿನ ತಲೆಮಾರಿಗೆ ಅವುಗಳ ವಿಶೇಷತೆಗಳ ಬಗ್ಗೆ ತಿಳಿಸಬೇಕು. ನಮ್ಮ ಇತಿಹಾಸವನ್ನು ನಾವು ಮರೆಯಬಾರದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತಿಹಾಸ ಉಪನ್ಯಾಸಕ ಈಶ್ವರ್ ಬಿ. ನಾಯ್ಕ ವಸ್ತುಗಳ ವಿಶೇಷತೆಗಳನ್ನು, ಅವುಗಳು ಆಗಿನ ಕಾಲದ ಕೆಲಸಗಳಲ್ಲಿ ಬಳಕೆಯಾಗುತ್ತಿದ್ದ ಬಗೆಗೆ ತಿಳಿಸಿದರು ಮತ್ತು ಅವುಗಳು ಆಧುನಿಕ ವಸ್ತುಗಳಿಗಿಂತ ಎಷ್ಟು ವಿಭಿನ್ನವಾಗಿದ್ದವು, ಅವುಗಳ ಕೆತ್ತನೆ ಮತ್ತು ಆಕಾರಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಿವಾಕರ್ ಎಸ್.ಹೆಚ್ ಅವುಗಳನ್ನು ಹೇಗೆ ಬಳಸುತ್ತಿದ್ದರು ಎಂಬುದನ್ನು ಪ್ರತಿ ವಸ್ತುಗಳನ್ನು ತೋರಿಸಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಶ್ರೀಮತಿ ಸಮೀನಾ ಆರ್.ಎಸ್. ಮಾತನಾಡಿ ಇತಿಹಾಸ ಸೃಷ್ಟಿಸುವ ನಾವು ನಮ್ಮ ಪೂರ್ವಜರ ಕೆಲಸವನ್ನು, ಹಿರಿಮೆಯನ್ನು ತಿಳಿದು ನಾಡು ನುಡಿ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕು, ಪ್ರಕೃತಿ ಪೂರಕವಾದ ವಸ್ತುಗಳನ್ನು ಬಳಸುವದು ಸೂಕ್ತ ಎಂದರು. ಇನ್ನುಳಿದಂತೆ ಗುತ್ಯಪ್ಪ, ಎನ್.ಟಿ. ನಾಯ್ಕ, ಶ್ರೀಮತಿ ವಾಣಿ ಡಿ.ಎಸ್., ಅನಿಲ್ ರೈ ಮತ್ತು ರಾಘವೇಂದ್ರ ಗೌಡ ಹಾಗೂ ಎಲ್ಲಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಅನಿಜ ಎಲ್. ಸಾಂಸ್ಕೃತಿಕ ವೇದಿಕೆ ಸಂಚಾಲಕರು ಆಯೋಜಿಸಿ ಸ್ವಾಗತಿಸಿದರು. ನಾರಾಯಣ ಗೌಡ ನಿರೂಪಿಸಿದ್ದರು. ಈರೇಶ ಎಲ್ಲರನ್ನು ವಂದಿಸಿದರು. ಕಾಲೇಜಿನ ಎಲ್ಲ ಭೋದಕ ಭೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

300x250 AD
Share This
300x250 AD
300x250 AD
300x250 AD
Back to top