ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಬುಡಕಟ್ಟು ಕುರಿತು ಮಂಡಿಸಿದ ಅಧ್ಯಯನ ಮಹಾ ಪ್ರಬಂಧಕ್ಕೆ ಇಲ್ಲಿನ ಅಸ್ಮಿತೆ ಫೌಂಡೇಶನ್ ನ ರಿಯಾಜ್ ಸಾಗರ್‌ಗೆ ಪಿಹೆಚ್‌ಡಿ ಡಾಕ್ಟರೇಟ್ ಪದವಿ ದೊರೆತಿದೆ.
ಕನ್ನಡ ವಿಶ್ವವಿದ್ಯಾಲಯ ಹಂಪಿ, ಸಮಾಜವಿಜ್ಞಾನಗಳ ನಿಕಾಯ, ಬುಡಕಟ್ಟು ಅಧ್ಯಯನ ವಿಭಾಗಕ್ಕೆ ರಿಯಾಜ್ “ಸಿದ್ದಿ ಬುಡಕಟ್ಟು ಸಮುದಾಯದ ಅಭಿವೃದ್ಧಿ ಸವಾಲು ಮತ್ತು ಸಾಧ್ಯತೆಗಳು (ಸರ್ಕಾರಿ ಅಭಿವೃದ್ಧಿ ಯೋಜನೆಗಳ ಒಂದುವರೆ ದಶಕದ ಅಧ್ಯಯನ)” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿದೆ. ಇವರಿಗೆ ಬುಡಕಟ್ಟು ಬುಟಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೋ. ಎ.ಸ್ ಪ್ರಭಾಕರ್ ಮಾರ್ಗದರ್ಶನ ಮಾಡಿದ್ದಾರೆ.
ಇಲ್ಲಿನ ಅಸ್ಮಿತೆ ಫೌಂಡೇಶನ್ ಸಂಸ್ಥೆಯ ಕಾರ್ಯನಿರ್ವಾಹಕರಾಗಿರುವ ರಿಯಾಜ್ ವೃತ್ತಿಪರ ಸಮಾಜಕಾರ್ಯ ಸಮಾಲೋಚಕರಾಗಿದ್ದು ಕಳೆದ 15 ವರ್ಷಗಳಿಂದ ಸ್ವಯಂಸೇವಾ ಸಂಸ್ಥೆಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರ ಅಧ್ಯಯನ ಮಹಾ ಪ್ರಬಂಧವು ಜಿಲ್ಲೆಯ ಸಿದ್ದಿ ಬುಡಕಟ್ಟು ಸಮುದಾಯದವರ ಅಭಿವೃದ್ಧಿ ಹಾಗೂ ಸರ್ಕಾರಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಗಳ ಕುರಿತು ವಿಶೇಷ ಬೆಳಕು ಚೆಲ್ಲಿದೆ. ಏ.4ರಂದು ವಿವಿಯಲ್ಲಿ ನಡೆಯುವ 33ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ನಡೆಯಲಿದೆ.