Slide
Slide
Slide
previous arrow
next arrow

ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ

300x250 AD

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಹಿಳೆಯರು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ವಿರೋಧಿಸಿ ಮಹಿಳಾ ಜಾಗೃತಿಯ ಕಾರ್ಯಕ್ರಮ ನಡೆಸಲಾಯಿತು. ವುಮೆನ್ ಇನ್ ಬ್ಲಾಕ್ ಹೋರಾಟದ ನೆನಪು ಮತ್ತು ಸಮಸ್ತ ಮಹಿಳಾ ಹಕ್ಕೊತ್ತಾಯಗಳನ್ನು ಮಂಡಿಸಲು ಕಪ್ಪು ಉಡುಗೆಯಲ್ಲಿ ಮೆಣದ ಬತ್ತಿಗಳನ್ನು ಬೆಳಗಿಸಿ ಮೌನವನ್ನು ಆಚರಿಸಲಾಯಿತು.

ಸುಮಾರು ಮೂವತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಹಿಳಾ ಅರಿವಿನ ಸಂದೇಶಗಳನ್ನು ಸಾರಿದರು. ಮಹಿಳಾಪರವಾದ ಹಾಡುಗಳನ್ನು ಹಾಡಿದರು. ಎರಡನೇ ಹಂತದಲ್ಲಿ ‘ಮಹಿಳಾ ಪರವಾದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಹಿತ ಸಾಧ್ಯವಾಗಿದೆಯೇ’ ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 25 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

300x250 AD

ಈ ಸ್ಪರ್ಧೆಯಲ್ಲಿ ಚಂದ್ರಿಕಾ ಎಸ್. ಮಹಾಲಕ್ಷ್ಮಿ ಪಾವನೆ ಪ್ರಥಮ, ಯಶೋಧಾ, ನಾಗರತ್ನಾ ದ್ವಿತೀಯ, ಸಂಗೀತಾ ಬೇಡಕೆ ಮತ್ತು ಗಂಗಾಧರ್ ತೃತೀಯ ಹಾಗೂ ಭಾವನಾ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.

ಡಾ. ವಿನಯಾ ಜಿ. ನಾಯಕ, ನಿಷತ್ ಶರೀಫ್, ಡಾ ಚಂದ್ರಶೇಖರ ಲಮಾಣಿ ಹಾಗೂ ಬಸವರಾಜ ಹೂಲಿಕಟ್ಟಿ ನಿರ್ಣಾಯಕರಾಗಿದ್ದರು. ಪ್ರಾಚಾರ್ಯರಾದ ಡಾ. ಎಂ ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಡಾ ವಿನಯಾ ನಾಯಕ ಆರಂಭದಲ್ಲಿ ಸ್ವಾಗತಿಸಿ, ವಂದಿಸಿದರು. ಉಷಾ ನಾಯಕ ನಿರೂಪಿಸಿದರು.

Share This
300x250 AD
300x250 AD
300x250 AD
Back to top