ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನಗರದ ವಿವಿಧೆಡೆ ರೂ.2,13,000/- ಮೌಲ್ಯದ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು.
ನಗರದ ಅಂಬೇವಾಡಿಯಲ್ಲಿರುವ ಜಿಟಿಸಿ ಕಾಲೇಜಿಗೆ 1 ಲಕ್ಷ ರೂ ಮೌಲ್ಯದ 10 ಗೋಡೆ ಫ್ಯಾನ್, ರೂ.70,000/- ಮೌಲ್ಯದ ಕುಡಿಯುವ ನೀರಿನ ಉಪಕರಣ, ಬಂಗೂರನಗರ ಪದವಿ ಮಹಾ ವಿದ್ಯಾಲಯಕ್ಕೆ ರೂ.70,000/- ಮೌಲ್ಯದ ಕುಡಿಯುವ ನೀರಿನ ಉಪಕರಣ ಮತ್ತು ನಾಡವರ ಸಂಘದ ಸಮುದಾಯ ಭವನಕ್ಕೆ ರು. 50,000/- ಮೌಲ್ಯದ 100 ಕುರ್ಚಿಗಳು ಹಾಗೂ ರೂ.13,000/ ಮೌಲ್ಯದ ಒಂದು ಕಪಾಟನ್ನು ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಖಲೀಲ್ ಕುಲಕರ್ಣಿ, ರಾಜು ರೋಸಯ್ಯ ಮೊದಲಾದವರು ಉಪಸ್ಥಿತರಿದ್ದರು.