ಸಿದ್ದಾಪುರ: ತಾಲೂಕಿನ ಐನ್ಬೈಲ್ ರೇಖಾ ಗಂಗಾಧರ ಹೆಗಡೆ ಇವರು, ಡಾಕ್ಟರ್ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದವರು ನಡೆಸಿದ ಸಂಗೀತ ತಾಳ-ವಾದ್ಯ ಪರೀಕ್ಷೆಯಲ್ಲಿ ಶಿರಸಿ ಕೇಂದ್ರಕ್ಕೆ ಶೇಕಡಾ 86 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆಯ ಸಾಧನೆಗೆ ಸಂಗೀತ ಗುರುಗಳಾದ ವಿದುಷಿ ಸ್ಮಿತಾ ಹೆಗಡೆ ಕುಂಟೇಮನೆ, ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಾಲಕಪೋಷಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಗೀತ ತಾಳ-ವಾದ್ಯ ಪರೀಕ್ಷೆ: ರೇಖಾ ಹೆಗಡೆ ಪ್ರಥಮ
